ಬೆಳ್ತಂಗಡಿ: ದ.ಕ.ಜಿಲ್ಲೆಯ ಗುರುವಾಯನಕೆರೆಯ ಕುವೆಟ್ಟು ಗ್ರಾಮದಲ್ಲಿರುವ ಎಕ್ಸೆಲ್ ಪಿ.ಯು. ಕಾಲೇಜು ಪರವಾನಿಗೆ ಸತ್ಯಕ್ಕೆ ದೂರವಾದ ಮಾತು. ಈ ಬಗ್ಗೆ ಯಾರಿಗಾದರೂ ಅನುಮಾನಗಳಿದ್ದರೆ, ಸರಕಾರಿ ದಾಖಲೆಗಳನ್ನು ಪರಿಶೀಲಿಸಬಹುದು ಎಂದು ಎಕ್ಸೆಲ್ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಸ್ಪಷ್ಟನೆ ನೀಡಿದ್ದಾರೆ.
ಗುರುವಾಯಕೆರೆಯ ಕುವೆಟ್ಟು ಎಂಬಲ್ಲಿ ಸ್ಥಾಪಿತವಾದ ಎಕ್ಸೆಲ್ ಪಿ.ಯು.ಕಾಲೇಜಿಗೆ 2021ರಲ್ಲಿ ಸರಕಾರದ ಮಾನ್ಯತೆ ದೊರಕಿದೆ. ಆ ಬಳಿಕದಿಂದ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ, ಬ್ಯಾಚ್‌ಗಳ ಸಂಖ್ಯೆ ಹೆಚ್ಚಳವಾಗುತ್ತಾ ಹೋಗಿದೆ. ಆದ್ದರಿಂದ ಹೆಚ್ಚುವರಿ ಪಿ.ಯು.ಕಾಲೇಜು ಬೇಕೆಂದು ನಾವು ಪರವಾನಿಗೆ ಬೇಕೆಂದು ಒಂದರೆಡು ಕಾಲೇಜುಗಳಿಗೆ ಪರವಾನಿಗೆಗೆ ಅರ್ಜಿ ಹಾಕಿದ್ದೆವು. ಈಗಾಗಲೇ ಒಂದು ಎಕ್ಸೆಲ್ ಕಾಲೇಜಿಗೆ ಪರವಾನಿಗೆ ಇದಿದ್ದರಿಂದ ಅದನ್ನೇ ಫಿಲ್ ಮಾಡಿ ಪ್ರತ್ಯೇಕ ಬ್ಯಾಚ್ ಮಾಡಿದರೆ ಅದಕ್ಕೇ ಪರವಾನಿಗೆ ನೀಡುತ್ತೇವೆ ಎಂದು ಸರಕಾರ ಸೂಚನೆ ನೀಡಿತ್ತು ಎಂದರು.
ಆದರೂ ನಾವು ಪ್ರತ್ಯೇಕ ಕಾಲೇಜಿಗೆ ಪರವಾನಿಗೆಗೆ 2024ರಲ್ಲಿ ಅರ್ಜಿ ಹಾಕಿದ್ದೆವು. ಆದರೆ 2021ರಲ್ಲಿ ಪರವಾನಿಗೆ ಹೊಂದಿದ ಕಾಲೇಜಿನಲ್ಲೇ ವಿದ್ಯಾರ್ಥಿಗಳ ಅಡ್ಮಿಷನ್ ಮಾಡಲು ಅವಕಾಶ ಸಿಕ್ಕಿದ್ದರಿಂದ 2024ರಲ್ಲಿ ಪರವಾನಿಗೆ ಸಿಕ್ಕಿರುವ ಕಾಲೇಜಿಗೆ ಯಾವುದೇ ದಾಖಲಾತಿ ಮಾಡಿರಲಿಲ್ಲ. ಆದರೆ ಅದಕ್ಕೆ ಬೇಕಾದ ದಾಖಲೆಗಳನ್ನು ಕೊಡುವಲ್ಲಿ ವಿಳಂಬ ಮಾಡಿದ್ದೆವು. 2026ರ ಮಾರ್ಚ್‌ನಲ್ಲಿ ಆ ಕಾಲೇಜು ಪರವಾನಿಗೆ ರದ್ದತಿಗೆ ಸರಕಾರಕ್ಕೆ ಮನವಿಯನ್ನು ಮಾಡಿದ್ದೆವು. ಅದರ ಪ್ರಕ್ರಿಯಿಯಂತೆ ಆ ಕಾಲೇಜು ಪರವಾನಿಗೆ ರದ್ದತಿಯಾಗಿದೆ. ಆದರೆ ಕೆಲವರು ಎಕ್ಸೆಲ್ ಪಿ ಯು ಕಾಲೇಜು ಪರವಾನಿಗೆಯೇ ರದ್ದುಗೊಂಡಿದೆ ಎಂಬ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ಮಾತು. ನಮ್ಮ ಕಾಲೇಜಿನ ಯಾವ ವಿದ್ಯಾರ್ಥಿಗಳ ದಾಖಲಾತಿಗೆ, ಭವಿಷ್ಯಕ್ಕೆ ಯಾವುದೇ ತೊಂದರೆಯಿಲ್ಲ. ಪೋಷಕರು, ವಿದ್ಯಾರ್ಥಿಗಳು ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಯಾರಿಗೇ ಇದರ ಬಗ್ಗೆ ಅನುಮಾನಗಳಿದ್ದರೂ ಸರಕಾರಿ ದಾಖಲೆಗಳನ್ನು ಪರಿಶೀಲಿಸಬಹುದು. ಗಾಳಿ ಸುದ್ದಿಗಳಿಗೆ ಯಾರೂ ಕಿವಿಕೊಡದಿರಿ ಎಂದು ಸುಮಂತ್ ಕುಮಾರ್ ಜೈನ್ ಸ್ಪಷ್ಟನೆ ನೀಡಿದರು.
PublicNext
14/06/2026 07:08 pm