ಮುಲ್ಕಿ:ಗುರುಗಳು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸುತ್ತಾರೆ ,ಅವರಿಂದ ಸಂಸ್ಕಾರ ಪಡೆದ ವಿದ್ಯಾರ್ಥಿಗಳು ಋಣಿಯಾಗಿ ಕಲಿತ ಸಂಸ್ಥೆ ಹಾಗೂ ಗುರು ಹಿರಿಯರನ್ನು ಮರೆಯಬಾರದು ಎಂದು ಪಕ್ಷಿಕೆರೆ ಪಂಜ ದ. ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲಾ ಎಸ್ ಡಿಎಂಸಿ ಅಧ್ಯಕ್ಷ ನವೀನ್ ಸಾಲ್ಯಾನ್ ಹೇಳಿದರು
ಅವರು ಪಂಜ ದ. ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 15 ವರ್ಷಗಳಿಂದ
ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಶಾಲಾ ಮುಖ್ಯ ಶಿಕ್ಷಕಿ ಐರಿನ್ ಡಿಸೋಜಾ ರವರಿಗೆ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು
ಮುಖ್ಯ ಅತಿಥಿಯಾಗಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ಎಂ ಶೆಟ್ಟಿ ಬೈಲಗುತ್ತು ಮುಖ್ಯ ಶಿಕ್ಷಕಿ ವಸಂತಿ .ಕೆ , ಸದಾನಂದ ಶೆಟ್ಟಿ,ಮಾಜೀ ಪಂ. ಸದಸ್ಯರಾದ ಸುರೇಶ್ ಪಂಜ, ಕೇಶವ ಪೂಜಾರಿ ಪಂಜ, ನವೀನ ಶೆಟ್ಟಿ ನಲ್ಯಗುತ್ತು ,ಸುಂದರ ಪೂಜಾರಿ ಉಲ್ಯ ,ರಾಜೇಶ್ ಶೆಟ್ಟಿ ಮಜಲಗುತ್ತು,ಸತೀಶ್ ಶೆಟ್ಟಿ ಪಂಜದ ಗುತ್ತು, ಲಕ್ಷ್ಮಣ್ ದೇವಾಡಿಗ ,ನವಜ್ಯೋತಿ ಮಹಿಳಾ ಮಂಡಲದ ಅಧ್ಯಕ್ಷೆ ಮಮತಾ ಶೆಟ್ಟಿ, ಶಾಲಾ ಸಹ ಶಿಕ್ಷಕಿ ಚೈತ್ರ ಶೆಟ್ಟಿ,ಅಂಗನವಾಡಿ ಕಾರ್ಯಕರ್ತೆ ತಾರಾ ಶೆಟ್ಟಿ , ಹಳೆ ವಿದ್ಯಾರ್ಥಿಗಳು ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ವಸಂತಿ. ಕೆ.ಸ್ವಾಗತಿಸಿದರು ಸಹ ಶಿಕ್ಷಕಿ ಕವಿತಾ ವಂದಿಸಿದರು.ಸಹ ಶಿಕ್ಷಕಿ ಪಲ್ಲವಿ ಕಾರ್ಯಕ್ರಮ ನಿರೂಪಿಸಿದರು
Kshetra Samachara
12/06/2026 08:03 pm
LOADING...