ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ವಸತಿ ಹಾಗೂ ನಿವೇಶನ ರಹಿತರ ಸಮೀಕ್ಷೆಗೆ ಅರ್ಜಿ ಆಹ್ವಾನ

ಮುಲ್ಕಿ: ಭಾರತ ಸರ್ಕಾರವು ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ)-2.0 ಯೋಜನೆಯಡಿ ಮೂಲ್ಕಿ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ವಾಸಿಸುವ, ಈವರೆಗೂ ವಸತಿ ಯೋಜನೆಯಡಿ ಸೌಲಭ್ಯ ಪಡೆಯದೇ ಇರುವ ವಸತಿ ರಹಿತರು (ನಿವೇಶನ/ಹಳೆಯ ಕಚ್ಚಾಮನೆಯುಳ್ಳವರು) ಮತ್ತು ನಿವೇಶನ ರಹಿತ ಮಹಿಳೆಯರು, ಹಿರಿಯ ನಾಗರಿಕರು, ವಿಧುರರು, ವಿಶೇಷ ಚೇತನರು ಹಾಗೂ ಮಾಜಿ ಸೈನಿಕರಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಅರ್ಜಿದಾರರು ಭಾವಚಿತ್ರ, ಆಧಾರ್ ಕಾರ್ಡ್, ಕುಟುಂಬದ ಪಡಿತರ ಚೀಟಿ ಹಾಗೂ ಪಡಿತರ ಚೀಟಿಯಲ್ಲಿರುವಂತಹ ಸದಸ್ಯರ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ. ವಸತಿ ರಹಿತರಾಗಿದ್ದಲ್ಲಿ ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಬ್ಯಾಂಕ್ ಖಾತೆಯ ವಿವರ, ಪಾನ್ ಕಾರ್ಡ್ ಹಾಗೂ ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳೊಂದಿಗೆ https://pmaymis.gov.in ದಲ್ಲಿ ಸ್ವಂತವಾಗಿ /ಗ್ರಾಹಕ ಸೇವಾ ಕೇಂದ್ರಗಳಲ್ಲಿ ಆನ್ ಲೈನ್ ಮೂಲಕ 30.06.2026 ರೊಳಗೆ ಅರ್ಜಿ ಸಲ್ಲಿಸಲು ಕೋರಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೂಲ್ಕಿ ನಗರ ಪಂಚಾಯತ್ ಕಛೇರಿಯನ್ನು ಸಂಪರ್ಕಿಸುವಂತೆ ಮುಖ್ಯಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Edited By : PublicNext Desk
PublicNext

PublicNext

05/06/2026 07:30 am

Cinque Terre

10.7 K

Cinque Terre

0