ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯ ಸರ್ಕಾರಕ್ಕೆ ಮುಸ್ಲಿಂ ಮೌಲ್ವಿಗಳ ಒತ್ತಾಯ

ಮೈಸೂರು: ಕಾಂಗ್ರೆಸ್ ಹಿರಿಯ ಶಾಸಕ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮುಸ್ಲಿಂ ಸಮುದಾಯದ ಮೌಲ್ವಿಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಮೌಲ್ವಿಗಳು, ಹಲವು ವರ್ಷಗಳಿಂದ ಜನಪರ ಸೇವೆ ಹಾಗೂ ರಾಜಕೀಯ ಅನುಭವ ಹೊಂದಿರುವ ತನ್ವೀರ್ ಸೇಠ್ ಅವರು ಸಮುದಾಯದ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಆದ್ದರಿಂದ ಅವರಿಗೆ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದರು. ಮೊದಲ ಅವಧಿಯಲ್ಲೇ ಅವರಿಗೆ ಸಚಿವ ಸ್ಥಾನ ಸಿಗಬೇಕಿತ್ತು ಸಚಿವ ಸ್ಥಾನ ಸಿಗದಿದ್ದರೂ ಪಕ್ಷದ ಪರವಾಗಿ ಸದಾ ಕೆಲಸ ಮಾಡುತ್ತಿದ್ದಾರೆ ಅವರ ಅನುಭವವನ್ನು ಪಕ್ಷದ ಹೈ ಕಮಾಂಡ್ ಗುರುತಿಸುವ ವಿಶ್ವಾಸವಿದೆ ಎಂದು ಹೇಳಿದರು.ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಮೌಲಾನಾ ಸಾದಿಕ್, ಮೌಲಾನಾ ನಸೀರ್ ಖಾನ್, ಮೌಲಾನಾ ಅಸ್ಲಂ ರಝಾ ಖುರೇಶಿ, ಜಾಫರ್ ಅಲಿ ಖಾನ್, ಎಂ.ಡಿ. ಮುಜಮ್ಮಿಲ್, ಜಾಕಿರ್ ಖಾನ್, ಸಿರಾಜುದ್ದೀನ್, ಮೌಲಾನಾ ಎಂ.ಡಿ. ಇರ್ಫಾನ್, ಸಯ್ಯದ್ ಅನಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Edited By : Manjunath H D
PublicNext

PublicNext

11/06/2026 08:14 pm

Cinque Terre

12.43 K

Cinque Terre

0

ಸಂಬಂಧಿತ ಸುದ್ದಿ