ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಮುದ್ರ ತೀರಕ್ಕೆ ಹೋಗುವ ಮುನ್ನ ಎಚ್ಚರ! ನೀರಿನಲ್ಲಿ ಇಂತಹ ಅಲೆಗಳು ಕಂಡರೆ ಜೀವಕ್ಕೆ ಗ್ಯಾರಂಟಿ ಇಲ್ಲ

ಬೇಸಿಗೆಯ ರಜೆ ಇರಲಿ ಅಥವಾ ವೀಕೆಂಡ್ ಇರಲಿ, ಸಮುದ್ರ ತೀರಕ್ಕೆ ಪ್ರವಾಸಿಗರು ಲಗ್ಗೆ ಇಡುವುದು ಸಾಮಾನ್ಯ. ಆದರೆ, ಹೊರಗಿನಿಂದ ಅತ್ಯಂತ ಸುಂದರವಾಗಿ ಕಾಣುವ ಸಮುದ್ರದ ಅಲೆಗಳ ಹಿಂದೆ ಅಷ್ಟೇ ಭೀಕರವಾದ ಅಪಾಯ ಅಡಗಿರುತ್ತದೆ. ಪ್ರಕೃತಿಯ ಈ ಅಗಾಧ ಶಕ್ತಿಯ ಮುಂದೆ ಮನುಷ್ಯ ಎಷ್ಟು ನಗಣ್ಯ ಎಂಬುದನ್ನು ನೆನಪಿಸುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಪ್ರವಾಸಿಗರಿಗೆ ಎಚ್ಚರಿಕೆಯ ಸಂದೇಶ ನೀಡುತ್ತಿದೆ. ಇಂತಹ ಅಪಾಯಕಾರಿ ಪರಿಸ್ಥಿತಿಗಳಲ್ಲೂ ಪ್ರವಾಸಿಗರ ಪ್ರಾಣ ರಕ್ಷಿಸುವ ಲೈಫ್‌ಗಾರ್ಡ್‌ಗಳ ಕಾರ್ಯ ನಿಜಕ್ಕೂ ಶ್ಲಾಘನೀಯ. ಕಡಿಮೆ ಸಂಬಳವಿದ್ದರೂ ಲೆಕ್ಕಿಸದೆ, ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸಮುದ್ರದ ಭೀಕರ ಅಲೆಗಳ ನಡುವೆ ಸಿಲುಕಿದವರನ್ನು ಇವರು ರಕ್ಷಿಸುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಇವರ ಧೈರ್ಯ ಮತ್ತು ನಿಸ್ವಾರ್ಥ ಸೇವೆಗೆ ಮನಸಾರೆ ಗೌರವ ಸಲ್ಲಿಸುತ್ತಿದ್ದಾರೆ.

Edited By : Nirmala Aralikatti
PublicNext

PublicNext

12/06/2026 01:26 pm

Cinque Terre

26.08 K

Cinque Terre

0