ಚೆನ್ನೈ: ತಮಿಳುನಾಡು ರಾಜ್ಯದ ಹೊಸೂರಿನಲ್ಲಿರುವ ಟಾಟಾ ಐಫೋನ್ ಕಾರ್ಖಾನೆಯು ಅಂತರ್ಜಲ ಮಾಲಿನ್ಯದ ಕಾರಣದಿಂದಾಗಿ ಮುಚ್ಚುವ ಭೀತಿ ಎದುರಿಸುತ್ತಿದೆ ಎಂದು ವರದಿಯಾಗಿದೆ.
ರಾಯಿಟರ್ಸ್ ವರದಿಯ ಪ್ರಕಾರ, ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿಯು (TNPCB) ಕಾರ್ಖಾನೆಯು ಹತ್ತಿರದ ಕೃಷಿ ಭೂಮಿಗಳಿಗೆ ಹರಡಿದ ಅಂತರ್ಜಲ ಮಾಲಿನ್ಯವನ್ನು ವಿವರಿಸಲು ವಿಫಲವಾದರೆ ಅದನ್ನು ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಿದೆ. ತಪಾಸಣೆಗಳ ವೇಳೆ, ಕಾರ್ಖಾನೆಯ ಆವರಣದಲ್ಲಿರುವ ಮಳೆನೀರು ಕೊಯ್ಲು ಕೊಳಕ್ಕೆ ತ್ಯಾಜ್ಯ ನೀರನ್ನು ಬಿಡಲಾಗಿದ್ದು, ಅದು ಉಕ್ಕಿ ಹರಿದು ಸುತ್ತಮುತ್ತಲಿನ ಕೃಷಿ ಪ್ರದೇಶಗಳ ಅಂತರ್ಜಲವನ್ನು ಕಲುಷಿತಗೊಳಿಸಿರುವುದು ಪತ್ತೆಯಾಗಿದೆ.
PublicNext
15/06/2026 03:11 pm
LOADING...