ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಕೊಲ್ಲೂರಿಗೆ ತಮಿಳುನಾಡು ಸಿಎಂ ವಿಜಯ ಜೋಸೆಫ್ ಭೇಟಿ : ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಜೀರೋಟ್ರಾಫಿಕ್

ಉಡುಪಿ: ತಮಿಳುನಾಡು ಮುಖ್ಯಮಂತ್ರಿ ವಿಜಯ್ ಜೋಸೆಫ್ ಇಂದು ಶ್ರೀ ಕ್ಷೇತ್ರ ಕೊಲ್ಲೂರಿಗೆ ಭೇಟಿ ನೀಡಿದ್ದಾರೆ. ಈ ಭೇಟಿಯ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಹೆದ್ದಾರಿ 66ರ ಬ್ರಹ್ಮಾವರ ಭಾಗದಲ್ಲಿ ಪೊಲೀಸ್ ಇಲಾಖೆಯು ವಾಹನ ಸಂಚಾರಕ್ಕೆ ಕೆಲಹೊತ್ತು ನಿರ್ಬಂಧ ವಿಧಿಸಿ, ಮುಖ್ಯಮಂತ್ರಿಗಳ ಸಂಚಾರದ ವೇಳೆ ಸಂಪೂರ್ಣ ಸಂಚಾರ ಮುಕ್ತ (ಝೀರೋ ಟ್ರಾಫಿಕ್) ವ್ಯವಸ್ಥೆ ಕಲ್ಪಿಸಿತ್ತು.

ವಿಜಯ್ ಜೋಸೆಫ್ ಮಧ್ಯಾಹ್ನ 2:45ರ ಸುಮಾರಿಗೆ ಮಂಗಳೂರಿನಿಂದ ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಬ್ರಹ್ಮಾವರ ತಲುಪಿದರು. ಅವರ ವಾಹನದ ಮುಂದೆ ಮತ್ತು ಹಿಂದೆ ಹಲವಾರು ಬೆಂಗಾವಲು ಪಡೆಯ ಪೊಲೀಸ್ ವಾಹನಗಳು ಸಾಗಿದವು. ಕರ್ನಾಟಕ ಪೊಲೀಸ್ ಹಾಗೂ ತಮಿಳುನಾಡು ಪೊಲೀಸರು ಜಂಟಿಯಾಗಿ ಬಿಗಿ ಭದ್ರತೆಯನ್ನು ಒದಗಿಸಿದ್ದರು.

Edited By : Vinayak Patil
PublicNext

PublicNext

12/06/2026 04:05 pm

Cinque Terre

13.74 K

Cinque Terre

0

ಸಂಬಂಧಿತ ಸುದ್ದಿ