ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆತಂಕ ಮೂಡಿಸುತ್ತಿರುವ ಕಬಿನಿ ನೀರಿನ ಪ್ರಮಾಣ

ಮೈಸೂರು: ರಾಜ್ಯದಲ್ಲೇ ಮೊದಲು ತುಂಬುವ ಡ್ಯಾಮ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಬಿನಿ ಡ್ಯಾಮ್ ನಲ್ಲಿ ದಿನೇ ದಿನೇ ನೀರಿನ ಪ್ರಮಾಣ ಇಳಿಕೆಯಾಗುತ್ತಿದೆ. ಈ ಬಾರಿ ಕೇರಳ- ಮೈಸೂರು ಗಡಿ ಭಾಗದಲ್ಲಿ ಮಳೆಯ ಅಭಾವ ಉಂಟಾಗಿರುವ ಕಾರಣ ಡ್ಯಾಮ್ ತುಂಬಿಲ್ಲ. ಗರಿಷ್ಟ 19 ಟಿಎಂಸಿಯಷ್ಟು ನೀರಿನ ಸಾಮರ್ಥ್ಯ ಹೊಂದಿರುವ ಕಬಿನಿ ಡ್ಯಾಮ್ ನಿಂದ ವ್ಯವಸಾಯ ಹಾಗೂ ಕುಡಿಯುವ ನೀರಿನ ಯೋಜನೆಗಳಿಗೆ ನೀರು ಸರಬರಾಜು ಆಗುತ್ತಿತ್ತು. ಮುಂದಿನ ದಿನಗಳಲ್ಲಿ ಮಳೆ ಅಭಾವ ಮುಂದುವರೆದರೆ ರೈತರು ಸಂಕಷ್ಟದಲ್ಲಿ ಸಿಲುಕಲಿದ್ದಾರೆ.

Edited By :
PublicNext

PublicNext

13/06/2026 07:45 am

Cinque Terre

14.68 K

Cinque Terre

0