ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಚೂರಿನಲ್ಲಿ ಸಚಿವ ಸ್ಥಾನಕ್ಕೆ ಹೆಚ್ಚಿದ ಆಗ್ರಹ

ರಾಯಚೂರು : ಐದು ಬಾರಿ ಶಾಸಕರಾಗಿರುವ ಹಂಪನಗೌಡ ಬಾದರ್ಲಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದ ಮುಖಂಡರು,ಕಾರ್ಯಕರ್ತರು, ಅಭಿಮಾನಿಗಳು ಪಾದಯಾತ್ರೆಯನ್ನು ನಡೆಸಿದರು.

ಶುಕ್ರವಾರ ನಗರದ ಎಪಿಎಂಸಿ ಗಣೇಶ ದೇವಸ್ಥಾನದಿಂದ ಪ್ರಾರಂಭವಾದ ಪಾದಯಾತ್ರೆ ಹೊಸಳ್ಳಿಕ್ಯಾಂಪ್, ಶ್ರೀ ಪರುಂ ಜಂಕ್ಷನ್ ಗೋರೆಬಾಳ, ಬಂಗಾರಿ ಕ್ಯಾಂಪ್ ಮೂಲಕ ಶಕ್ತಿ ಪೀಠ ಅಂಬಾಮಠಕ್ಕೆ ಬೃಹತ್ ಪಾದಯಾತ್ರೆ ಹಮ್ಮಿಕೊಂಡು ಈ ಬಾರಿ ಹಂಪನಗೌಡ ಬಾದರ್ಲಿ ಅವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ಕೊಡಬೇಕು ಎಂದು ಕೂಗುತ್ತಾ ಆಗ್ರಹಿಸಿದರು. ಪಾದಯಾತ್ರೆ ಸಿದ್ದಿ ಪರ್ವತ ಅಂಬಾಮಠಕ್ಕೆ ತಲುಪಿತು ಈ ವೇಳೆ ಅಂಬಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ತದನಂತರ ಸಾವಿರದ ಒಂದು ತೆಂಗಿನಕಾಯಿ ಒಡೆದು ದೇವರಲ್ಲಿ ಹರಕೆ ಹೊತ್ತರು.

ಬೈಟ್ : ಅಶೋಕ್ ಉಮಲೂಟಿ.. ಕಾಂಗ್ರೆಸ್ ಮುಖಂಡರು

Edited By :
PublicNext

PublicNext

13/06/2026 08:24 am

Cinque Terre

12.08 K

Cinque Terre

0