ಅಸ್ಸಾಂ : ಜೋರ್ಹತ್‌ನಲ್ಲಿರುವ ವಾಯುಪಡೆ ನಿಲ್ದಾಣದಲ್ಲಿ ಮಿಲಿಟರಿ AN-32 ಕಾರ್ಗೋ ವಿಮಾನವೊಂದು ಪತನಗೊಂಡಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಸಾಮಗ್ರಿ ಸಾಗಾಟಕ್ಕೆ ಬಳಸಲಾಗುತ್ತಿದ್ದ ಈ ವಿಮಾನವು ವಾಯುನೆಲೆಯಲ್ಲಿ ಇಳಿಯಲು ಪ್ರಯತ್ನಿಸುತ್ತಿದ್ದಾಗ ಅಪಘಾತಕ್ಕೀಡಾಗಿದೆ.
ಮೂಲಗಳ ಪ್ರಕಾರ, ದುರಂತಕ್ಕೀಡಾದ ವಿಮಾನದ ಪೈಲಟ್ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಆದರೆ, ವಿಮಾನದಲ್ಲಿದ್ದ ಇತರ ಸಿಬ್ಬಂದಿ ಕುರಿತು ತಕ್ಷಣಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
PublicNext
13/06/2026 11:40 am
LOADING...