ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲ್ಕತ್ತಾದಲ್ಲಿ 4,000 ಇವಿಎಂ ಭಸ್ಮ: ನಿಗೂಢ ಬೆಂಕಿ, ಚುನಾವಣಾ ಸಾಕ್ಷ್ಯಗಳಿಗೆ ಕೊಳ್ಳಿ - ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ!

ಕೋಲ್ಕತ್ತಾ : ಸರ್ಕಾರಿ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚು ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ಸುಟ್ಟು ಭಸ್ಮವಾಗಿವೆ. ಈ ಘಟನೆಯು ವ್ಯವಸ್ಥಿತ ವಿಧ್ವಂಸಕ ಕೃತ್ಯವಿರಬಹುದೆಂಬ ಬಲವಾದ ಅನುಮಾನಕ್ಕೆ ಕಾರಣವಾಗಿದ್ದು, ಸರ್ಕಾರವು ವಿಶೇಷ ತನಿಖಾ ತಂಡಕ್ಕೆ ಆದೇಶಿಸಿದೆ. ಪೊಲೀಸರು ಈಗಾಗಲೇ ತನಿಖೆಯನ್ನು ಆರಂಭಿಸಿದ್ದಾರೆ.

ಸಚಿವರ ಹೇಳಿಕೆ ಮತ್ತು ಅನುಮಾನದ ಹುತ್ತ

ಪಶ್ಚಿಮ ಬಂಗಾಳದ ಅಗ್ನಿಶಾಮಕ ಸೇವೆಗಳ ಸಚಿವ ಕೌಶಿಕ್ ಚೌಧುರಿ ಈ ಕುರಿತು ಮಾತನಾಡಿ, "ಬೆಂಕಿಯ ಕಾರಣದ ಹಿಂದೆ ಸಂಭವನೀಯ ವಿಧ್ವಂಸಕ ಕೃತ್ಯದ ಅನುಮಾನ ಎದುರಾಗಿದೆ. ಈ ಕಟ್ಟಡದಲ್ಲಿ ಚುನಾವಣಾ ಆಯೋಗದ ಕಚೇರಿಯೂ ಇತ್ತು. ಹೀಗಾಗಿ, ಕಟ್ಟಡದಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿರುವುದು ಅನುಮಾನಕ್ಕೆ ಕಾರಣವಾಗಿದೆ.

ಸುಟ್ಟುಹೋದ ಇವಿಎಂಗಳ ಜೊತೆಗೆ, ಸರ್ವಶಿಕ್ಷಾ ಅಭಿಯಾನ, ಮಧ್ಯಾಹ್ನದ ಬಿಸಿಯೂಟ ಮತ್ತು ತೋಟಗಾರಿಕಾ ಇಲಾಖೆಗಳ ಕಚೇರಿಗಳೂ ಇದೇ ಬಹುಮಹಡಿ ಕಟ್ಟಡದಲ್ಲಿದ್ದವು. ಘಟನೆಯ ತನಿಖೆಗೆ ಎಸ್ಐಟಿ ಆದೇಶಿಸಲಾಗಿದೆ" ಎಂದು ತಿಳಿಸಿದ್ದಾರೆ.

ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ

ಈ ಘಟನೆ ಕುರಿತು ತೀವ್ರ ಪ್ರತಿಕ್ರಿಯೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಟ್ವೀಟ್ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಆರೋಪದಲ್ಲಿ, "ಬಿಜೆಪಿ ಮತ್ತು ಚುನಾವಣಾ ಆಯೋಗದಂತಹ ಮುಖ್ಯ ಪಿತೂರಿಗಾರರಿಗೆ ಯಾರಿಗಿಂತಲೂ ಚೆನ್ನಾಗಿ ತಿಳಿದಿದೆ, ಪರಿಶೀಲನೆಯನ್ನು ತಪ್ಪಿಸಲು ಇರುವ ಖಚಿತ ಮಾರ್ಗವೆಂದರೆ ಪರಿಶೀಲಿಸಲು ಏನೂ ಉಳಿದಿಲ್ಲ ಎಂದು ಖಚಿತಪಡಿಸಿಕೊಳ್ಳುವುದು" ಎಂದು ಗಂಭೀರ ಹೇಳಿಕೆ ನೀಡಿದ್ದಾರೆ.

ಈ ಮೂಲಕ ಅವರು ಇವಿಎಂ ಭಸ್ಮವಾಗಿರುವುದರ ಹಿಂದೆ ದೊಡ್ಡ ಪಿತೂರಿ ಇದೆ ಎಂದು ಪರೋಕ್ಷವಾಗಿ ಆರೋಪಿಸಿದ್ದಾರೆ.

Edited By : Abhishek Kamoji
PublicNext

PublicNext

13/06/2026 11:15 am

Cinque Terre

19.22 K

Cinque Terre

2

ಸಂಬಂಧಿತ ಸುದ್ದಿ