ವಾಷಿಂಗ್ಟನ್: ಇರಾನ್‌ನೊಂದಿಗಿನ ಶಾಂತಿ ಸಂಧಾನ ಒಪ್ಪಂದಕ್ಕೆ ಸಹಿ ಹಾಕಿದ ಮಾತ್ರಕ್ಕೆ ಆ ದೇಶಕ್ಕೆ ಹಣ ನೀಡಿದ್ದೇವೆ ಎಂಬ ಊಹಾಪೋಹಗಳಿಗೆ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ತೆರೆ ಎಳೆದಿದ್ದಾರೆ.
ಸುಳ್ಳು ಮಾಹಿತಿ ತಳ್ಳಿಹಾಕಿದ ವ್ಯಾನ್ಸ್
ಶುಕ್ರವಾರ, ಹೋರ್ಮುಜ್ ಜಲಸಂಧಿಯನ್ನು ಪುನಃ ತೆರೆಯುವುದು ಹಾಗೂ ಇರಾನ್‌ನ ಅಣ್ವಸ್ತ್ರ ಕಾರ್ಯಕ್ರಮಕ್ಕೆ ಕಡಿವಾಣ ಹಾಕುವ ಸಾಧ್ಯತೆಯಿರುವ ಒಪ್ಪಂದದ ಬಗ್ಗೆ ಹರಿದಾಡುತ್ತಿದ್ದ ಮಾಹಿತಿಯನ್ನು ವ್ಯಾನ್ಸ್ "ಸುಳ್ಳು ಮಾಹಿತಿ" ಎಂದು ತಳ್ಳಿಹಾಕಿದರು.
ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಅವರು, "ಜಲಸಂಧಿಯನ್ನು ಪುನಃ ತೆರೆಯುವ ಮತ್ತು ಇರಾನ್‌ನ ಅಣ್ವಸ್ತ್ರ ಕಾರ್ಯಕ್ರಮವನ್ನು ಕೊನೆಗೊಳಿಸುವ ಒಪ್ಪಂದದ ಬಗ್ಗೆ ಸಾಕಷ್ಟು ಸುಳ್ಳು ಮಾಹಿತಿ ಹರಿದಾಡುತ್ತಿದೆ" ಎಂದು ತಿಳಿಸಿದರು.
ಹಣ ಬಿಡುಗಡೆ ಕುರಿತು ಖಚಿತಪಡಿಸಿದ ವ್ಯಾನ್ಸ್
"ಮೊದಲನೆಯದಾಗಿ, ಇರಾನ್‌ಗೆ ಯಾವುದೇ ನಗದು ಹಣ ನೀಡಲಾಗುತ್ತಿಲ್ಲ. ಕೇವಲ ಒಪ್ಪಂದಕ್ಕೆ ಸಹಿ ಹಾಕಿದ ಕಾರಣಕ್ಕೆ ಅಥವಾ ಸಭೆಯಲ್ಲಿ ಭಾಗವಹಿಸಿದ ಕಾರಣಕ್ಕೆ ಯಾವುದೇ ಹಣವನ್ನು ಬಿಡುಗಡೆ ಮಾಡಲಾಗುವುದಿಲ್ಲ"ಎಂದು ವ್ಯಾನ್ಸ್ ಖಚಿತಪಡಿಸಿದ್ದಾರೆ.
ಒಪ್ಪಂದದ ನಿಯಮಗಳನ್ನು ಇರಾನ್ ಸಂಪೂರ್ಣವಾಗಿ ಪಾಲಿಸಿದರೆ ಮಾತ್ರ ಆರ್ಥಿಕ ಲಾಭಗಳು ದೊರೆಯಲಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಒಪ್ಪಂದವು ಮಧ್ಯಪ್ರಾಚ್ಯ ಪ್ರದೇಶದಲ್ಲಿ ಮಹತ್ವದ ಬದಲಾವಣೆಯನ್ನು ತರಬಲ್ಲದು ಹಾಗೂ ಶಾಶ್ವತ ಶಾಂತಿಗೆ ದಾರಿ ಮಾಡಿಕೊಡುವ ಸಾಧ್ಯತೆಯೂ ಇದೆ ಎಂದು ವ್ಯಾನ್ಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
PublicNext
13/06/2026 07:29 am
LOADING...