ಸದ್ಯ ಬಾಂಗ್ಲಾದೇಶದಲ್ಲಿ ನಡೆದ ಮೊಬೈಲ್ ಕಳ್ಳತನದ ಈ ವಿಡಿಯೋವೊಂದು ವೈರಲ್ ಆಗಿದೆ. ಜೇಬಿಗೆ ಕತ್ತರಿ ಹಾಕುವಲ್ಲಿ ಕಿಲಾಡಿಯಾಗಿದ್ದ ಕಳ್ಳನೊಬ್ಬ, ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದು ನಡುರಸ್ತೆಯಲ್ಲೇ ಬೆಂಡಾದ ಘಟನೆ ಬೆಳಕಿಗೆ ಬಂದಿದೆ.
ಜನಜಂಗುಳಿಯಿಂದ ಕೂಡಿದ ಆ ಜಾಗದಲ್ಲಿ ಕಳ್ಳನೊಬ್ಬ ಹೊಂಚು ಹಾಕಿ ತನ್ನ ಪಕ್ಕದಲ್ಲೇ ನಿಂತಿದ್ದ ವ್ಯಕ್ತಿಯ ಗಮನ ಬೇರೆಡೆ ಇರುವುದನ್ನು ನೋಡಿ, ಮೆಲ್ಲಗೆ ಆತನ ಜೇಬಿಗೆ ಕೈ ಹಾಕಿದ್ದಾನೆ. ಮೊಬೈಲ್ ಅನ್ನು ಹೊರಗೆಳೆದು, ತನ್ನ ಕಿಸೆಗೆ ಇಳಿಸಿಕೊಂಡು ಅಲ್ಲಿಂದ ಎಸ್ಕೇಪ್ ಆಗಲು ಪ್ಲಾನ್ ಮಾಡಿದ್ದಾನೆ.
ಕಳ್ಳ ಮೊಬೈಲ್ ಕದ್ದು ಜಾಗ ಖಾಲಿ ಮಾಡಲು ತಿರುಗುವಷ್ಟರಲ್ಲೇ ಮಾಲೀಕನಿಗೆ ವಿಷಯ ಗೊತ್ತಾಗಿಬಿಟ್ಟಿದೆ! ತಡ ಮಾಡದ ಆ ವ್ಯಕ್ತಿ, ಮಿಂಚಿನ ವೇಗದಲ್ಲಿ ಕಳ್ಳನ ಕೈ ಹಿಡಿದು ಎಳೆದಿದ್ದಾನೆ. ನಡುರಸ್ತೆಯಲ್ಲೇ ಕಳ್ಳನಿಗೆ ಗೂಸಾ ಕೊಡಲು ಆರಂಭಿಸಿ, ಆತನ ಬಳಿ ಇದ್ದ ತನ್ನ ಮೊಬೈಲ್ ಅನ್ನು ವಾಪಸ್ ಕಸಿದುಕೊಂಡಿದ್ದಾನೆ. ಆತನ ಕೈಯಲ್ಲಿದ್ದ ಬ್ಯಾಗ್ ಚೆಕ್ ಮಾಡುವಾಗ ಅದರಲ್ಲಿ ಅರ್ಜೆಂಟೀನಾ ಫುಟ್‌ಬಾಲ್ ತಂಡದ ಜೆರ್ಸಿ ಇತ್ತು.
ರಸ್ತೆಯಲ್ಲಿ ಗಲಾಟೆಯಾಗುತ್ತಿದ್ದಂತೆ ಸುತ್ತಮುತ್ತಲಿದ್ದ ಜನರೆಲ್ಲಾ ಓಡಿ ಬಂದಿದ್ದಾರೆ. ಕಳ್ಳತನದ ಮ್ಯಾಟರ್ ತಿಳಿಯುತ್ತಿದ್ದಂತೆ ಅಲ್ಲಿದ್ದವರೆಲ್ಲಾ ಸೇರಿ ಕಳ್ಳನಿಗೆ ಸುತ್ತುವರಿದು ಎಲ್ಲರೂ ಸೇರಿ ಆತನಿಗೆ ಥಳಿಸಿದ್ದಾರೆ.
PublicNext
13/06/2026 02:37 pm
LOADING...