ಬ್ರಹ್ಮಾವರ: ಉಡುಪಿ ಶ್ರೀ ಕೃಷ್ಣ ಮಠ ಪರ್ಯಾಯ ಶ್ರೀ ಶೀರೂರು ಮಠದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ಸಂಜೆ ನಾಟ್ಯರಂಗ ಪೂತ್ತೂರು ಇದರ ಮುಖ್ಯಸ್ಥೆ ವಿಧುಷಿ ಮಂಜುಳಾ ಸುಬ್ರಹ್ಮಣ್ಯ ಮತ್ತು ತಂಡದವರಿಂದ ಭರತನಾಟ್ಯ ಕಾರ್ಯಕ್ರಮ ಜರುಗಿತು.
ತಂಡದ ಕೀರ್ತನ ವರ್ಮ ಮತ್ತು ಮೇಧಾ ಭಟ್ ಇವರಿಂದ ಆರಂಭಗೊಂಡ ಕಾರ್ಯಕ್ರಮ ಹಲವಾರು ದಾಸರ ಕೃತಿಗಳನ್ನು ಶಾಸ್ತ್ರೀಯ ರಾಗ ತಾಳಗಳನ್ನು ಹೊಂದಿದ ಕೃತಿಯಲ್ಲಿ ಅನಂತ ಶಯನ ಮತ್ತು ಗೀತಾ ಗೋವಿಂದ ಕೃತಿ ಸೇರಿದಂತೆ ನಾನಾ ಗಾಯನಕ್ಕೆ ವಿಧುಷಿ ಮಂಜುಳಾ ಸುಬ್ರಹ್ಮಣ್ಯ ಅವರು ನೃತ್ಯಗಾತಿಯೊಂದಿಗೆ ಭಾವಪೂರ್ಣವಾಗಿ ಅಭಿವ್ಯಕ್ತ ಪಡಿಸಿ ಮೆಚ್ಚುಗೆಗೆ ಪಾತ್ರರಾದರು.
ಶಾಸ್ತ್ರೀಯ ನೃತ್ಯ ಭರತ ನಾಟ್ಯದೊಂದಿಗೆ ಕಳರಿಪಯಟ್ಟು ಸೇರಿದಂತೆ ರಂಗಕಲೆ, ಜಾನಪದ ಕಲೆ, ಸಾಂಸ್ಕೃತಿಕ ಕಲೆಯನ್ನು ದೇಶದ ನಾನಾ ಭಾಗದಲ್ಲಿ ಪ್ರದರ್ಶನ ನೀಡುತ್ತಿರುವ ಮಂಜುಳಾ ಸುಬ್ರಹ್ಮಣ್ಯ ರವರ ಕಾರ್ಯಕ್ರಮವನ್ನು ಸಹಸ್ರಾರು ಪ್ರೇಕ್ಷಕ ವರ್ಗ ತನ್ಮಯತೆಯಿಂದ ಆಸ್ವಾದಿಸಿದರು.
Kshetra Samachara
13/06/2026 01:26 pm
LOADING...