ನವಲಗುಂದ: ನವಲಗುಂದ ಮತ್ತು ಅಣ್ಣಿಗೇರಿ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಎನ್.ಹೆಚ್.ಕೋನರೆಡ್ಡಿ ಅಭಿಮಾನಿ ಬಳಗದಿಂದ ಶಾಸಕ ಎನ್ ಹೆಚ್ ಕೋನರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಬೃಹತ್ ರ್ಯಾಲಿಯನ್ನು ಜೂನ್ 17 ಬುಧವಾರದಂದು 11 ಗಂಟೆಗೆ ಗಣಪತಿ ಗುಡಿ ದೇವಸ್ಥಾನದಿಂದ ಗಾಂಧಿ ಮಾರ್ಕೆಟ್ ಲಿಂಗರಾಜ ಸರ್ಕಲ್ ಹಾಗೂ ಗಾಂಧಿ ಸರ್ಕಲ್ ಮಾರ್ಗವಾಗಿ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ನವಲಗುಂದ ಬ್ಲಾಕ್ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡ್ರು ಅಣ್ಣಿಗೇರಿ ಬ್ಲಾಕ್ ಅಧ್ಯಕ್ಷ ಮಂಜುನಾಥ ಮಾಯಣ್ಣವರ ಹಾಗೂ ಎನ್ ಎಚ್ ಕೋನರಡ್ಡಿ ಅಭಿಮಾನಿ ಬಳಗದ ಅಧ್ಯಕ್ಷ ಪ್ರಭಾಕರ ಮೋಹಿತೆ ಪ್ರಕಟಣೆಗೆ ತಿಳಿಸಿದ್ದಾರೆ.
ಈ ರ್ಯಾಲಿಯಲ್ಲಿ ಎಲ್ಲ ಕಾಂಗ್ರೆಸ್ ನಾಯಕರು ಮುಖಂಡರು ಹಾಗೂ ಅಭಿಮಾನಿಗಳು ನಮ್ಮ ಬಂಡಾಯದ ನಾಡಿನ ನಾಯಕನಿಗೆ ಸಚಿವ ಸ್ಥಾನ ನೀಡುವ ಕುರಿತು ಈ ರ್ಯಾಲಿಯನ್ನು ಹಮ್ಮಿಕೊಂಡಿದ್ದು ಕಾಂಗ್ರೆಸ್ ಕಾರ್ಯಕರ್ತರು ಹೇಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರ್ಯಾಲಿ ಯಶಸ್ವಿಗೊಳಿಸಬೇಕು ಎಂದು ಪ್ರಕಟಣೆಗೆ ತಿಳಿಸಿದ್ದಾರೆ.
Kshetra Samachara
14/06/2026 05:14 pm
LOADING...