ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬಸ್ಸಿನ ವ್ಯವಸ್ಥೆ ಇಲ್ಲದೆ ಜನರು ಕಂಗಾಲು : ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಮು..!

ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರದ ಶಕ್ತಿಯೋಜನೆ ಜಾರಿಯಾಗಿದ್ದೇ ತಡ ಬಸ್ಸಿನಲ್ಲಿ ಸೀಟ್ ಸಿಕ್ಕರೆ ಚುನಾವಣೆ ಸೀಟ್ ಸಿಕ್ಕಂತಾಗುತ್ತದೆ. ಅಷ್ಟರಮಟ್ಟಿಗೆ ಬಸ್ಸಿನಲ್ಲಿ ಜನದಟ್ಟಣೆ ಹೆಚ್ಚಾಗುತ್ತಲೇ ಹೋಗಿದೆ. ಅದರಲ್ಲೂ ಗ್ರಾಮೀಣ ಭಾಗದ ಬಸ್ಸಿನ ಸ್ಥಿತಿ ನೋಡಿದರೆ ನಿಜಕ್ಕೂ ಎಂತವರಿಗೂ ಮರುಕ ಹುಟ್ಟಿಸುವುದಂತೂ ಸತ್ಯ.

ನವಲಗುಂದ-ನರಗುಂದ ಮಾರ್ಗವಾಗಿ ಪ್ರತಿನಿತ್ಯ ಹುಬ್ಬಳ್ಳಿಯಿಂದ ನವಲಗುಂದ ಮತ್ತು ನರಗುಂದ ನಗರಕ್ಕೆ ಹಲವಾರು ವರುಷಗಳಿಂದ ಕಾರ್ಯ ನಿಮಿತ್ತ ಸಾವಿರಾರು ಜನರು ಪ್ರಯಾಣಿಸುತ್ತಿದ್ದಾರೆ. ಆದರೆ ಈ ಭಾಗದ ಜನರಿಗೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ರಾತ್ರಿಯ ಸಮಯದಲ್ಲಿ ಬಸ್ಸಿಗಾಗಿ ಸರ್ಕಸ್ ಮಾಡುವಂತಾಗಿದೆ. ರಾತ್ರಿಯ ಸಮಯದಲ್ಲಿ ಅಂದರೆ ಸುಮಾರು 7 ಗಂಟೆಯಿಂದ 9:30 ರ ವರೆಗೆ ಪ್ರಯಾಣಿಸುವ ಅಂಗವಿಕಲರು, ಮಕ್ಕಳು ಮತ್ತು ಹಿರಿಯ ನಾಗರಿಕರನ್ನು ಒಳಗೊಂಡಂತೆ ಇತರ ಪ್ರಯಾಣಿಕರಿಗೂ ಈ ಅವಧಿಯಲ್ಲಿ ಯಾವುದೇ ಬಸ್ ಸೌಕರ್ಯ ಇರದೇ ಇರುವುದು ತೊಂದರೆಯನ್ನುಂಟು ಮಾಡಿದೆ.

ಇನ್ನು ಈ ಅವಧಿಯಲ್ಲಿ ಬಸ್ ಸೌಲಭ್ಯ ಕಲ್ಪಿಸಲು ಹಲವಾರು ಬಾರಿ ದೂರವಾಣಿ ಮುಖಾಂತರ ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ದೂರು ನೀಡಿ ಬಸ್ ವ್ಯವಸ್ಥೆ ಕಲ್ಪಿಸಲು ಮನವಿ ಮಾಡಿದ್ದು, ಸಾರ್ವಜನಿಕರ ಪ್ರಯತ್ನ ವಿಫಲವಾಗಿದೆ. ಈ ಹಿಂದೆ ಇದ್ದ ಬಾಗಲಕೋಟೆ-ಇಳಕಲ್-ಔರಂಗಾಬಾದ್ (ನವಲಗುಂದ ಮಾರ್ಗವಾಗಿ) ಬಸ್ಸುಗಳನ್ನು ರದ್ದುಪಡಿಸಿದ್ದರಿಂದ ಈ ಅವ್ಯವಸ್ಥೆಗೆ ಕಾರಣವಾಗಿದೆ.

ಈ ಅವಧಿಯಲ್ಲಿ ನವಲಗುಂದ-ನರಗುಂದ ಮಾರ್ಗವಾಗಿ ಪ್ರಯಾಣಿಸುವ ಸುಮಾರು 40-50 ಕ್ಕೂ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ನಂತರ ತಡವಾಗಿ ನಿಯೋಜಿಸಿರುವ ಬಸ್ಸಿನಲ್ಲಿ ಪ್ರಯಾಣಿಸಲು ಒಂದೇ ಬಾರಿಗೆ ಪ್ರಯಾಣಿಕರು ಪ್ರಯತ್ನಿಸುತ್ತಿರುವುದರಿಂದ ನೂಕುನುಗ್ಗಲು ಉಂಟಾಗಿ ಹಿರಿಯ ನಾಗರಿಕರು ಮತ್ತು ವಿಶೇಷವಾಗಿ ಅಂಗವಿಕಲ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಮನವಿ ಕೂಡ ಸಲ್ಲಿಸಿದ್ದು, ಇನ್ನಾದರೂ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಲಿ ಎಂಬುದು ಜನರ ಆಗ್ರಹ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

13/06/2026 04:24 pm

Cinque Terre

99.37 K

Cinque Terre

5

ಸಂಬಂಧಿತ ಸುದ್ದಿ