ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳಿ ಮೇಲೆ ಹೊರಟಿದ್ದವರಿಗೆ ರೈಲು ಡಿಕ್ಕಿ - ಹಲವರ ಸಾವು, ಮಧ್ಯ ಪ್ರದೇಶದಲ್ಲಿ ದುರಂತ

ಭೋಪಾಲ್ : ಮಧ್ಯಪ್ರದೇಶದ ಮೊರೇನಾ ಜಿಲ್ಲೆಯಲ್ಲಿ ಭಾನುವಾರ ಭೀಕರ ರೈಲು ದುರಂತ ಸಂಭವಿಸಿದೆ.ನಿಂತಿದ್ದ ರೈಲಿನಿಂದ ಕೆಳಗಿಳಿದು ಹಳಿ ದಾಟುತ್ತಿದ್ದ ಪ್ರಯಾಣಿಕರ ಮೇಲೆ ಎದುರಿನಿಂದ ಬಂದ ಮತ್ತೊಂದು ಎಕ್ಸ್‌ಪ್ರೆಸ್ ರೈಲು ಹರಿದ ಪರಿಣಾಮ ಹಲವರು ಸಾವನ್ನಪ್ಪಿದ್ದು, ಹಲವಾರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ರೈಲ್ವೆ ಅಧಿಕಾರಿಗಳು ನೀಡಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ ಈ ಆಘಾತಕಾರಿ ಘಟನೆ ನಡೆದಿದೆ.

ಉತ್ತರ ಮಧ್ಯ ರೈಲ್ವೆಯ ಝಾನ್ಸಿ ವಿಭಾಗದ ಹೇತಂಪುರ ರೈಲು ನಿಲ್ದಾಣದ ಬಳಿ ಸಾಯಂಕಾಲ ಸುಮಾರು 4.15ರ ಸುಮಾರಿಗೆ ರೈಲು ಸಂಖ್ಯೆ 19665 ಖಜುರಾಹೊ-ಉದಯ್‌ಪುರ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ಹಠಾತ್ ಆಗಿ ನಿಂತಿದೆ. ಆರಂಭಿಕ ವರದಿಗಳ ಪ್ರಕಾರ, ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿ ಹರಡಿದ್ದರಿಂದ ಗಾಬರಿಗೊಂಡ ಪ್ರಯಾಣಿಕರು ತಕ್ಷಣವೇ ರೈಲಿನಿಂದ ಕೆಳಗಿಳಿದು ಓಡಲಾರಂಭಿಸಿದ್ದಾರೆ. ಆದರೆ, ರೈಲ್ವೆ ಅಧಿಕಾರಿಗಳ ಸ್ಪಷ್ಟನೆ ಪ್ರಕಾರ, ಜನರಲ್ ಬೋಗಿಯಲ್ಲಿದ್ದ ಪ್ರಯಾಣಿಕರೊಬ್ಬರು ಅಲಾರಾಂ ಚೈನ್ (Alarm Chain Pulling – ACP) ಎಳೆದಿದ್ದರಿಂದ ರೈಲು ಅಲ್ಲಿ ನಿಲ್ಲಬೇಕಾಯಿತು.

ರೈಲು ನಿಲ್ಲುತ್ತಿದ್ದಂತೆ ಆತಂಕಗೊಂಡ ಪ್ರಯಾಣಿಕರು ಪಕ್ಕದಲ್ಲೇ ಇದ್ದ ಮತ್ತೊಂದು ರೈಲ್ವೆ ಹಳಿಯ (Adjacent track) ಮೇಲೆ ನಿಂತಿದ್ದಾರೆ. ಇದೇ ವೇಳೆ, ಅದೇ ಹಳಿಯ ‘ಅಪ್ ಲೈನ್’ನಲ್ಲಿ ತೀವ್ರ ವೇಗವಾಗಿ ಬಂದ ರೈಲು ಸಂಖ್ಯೆ 20424 ಫಿರೋಜ್‌ಪುರ-ಸಿವೋನಿ ಪಾತಾಳಕೋಟ್ ಎಕ್ಸ್‌ಪ್ರೆಸ್, ಹಳಿಯ ಮೇಲಿದ್ದ ಪ್ರಯಾಣಿಕರಿಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ, ಸ್ಥಳದಲ್ಲೇ ಹಲವು ಪ್ರಯಾಣಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ ಮತ್ತು ಇನ್ನು ಕೆಲವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ. ಸದ್ಯ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ.

Edited By : Nagaraj Tulugeri
PublicNext

PublicNext

14/06/2026 07:31 pm

Cinque Terre

41.52 K

Cinque Terre

0