ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಬಾರಕೂರು ಶ್ರೀ ವೇಣುಗೋಪಾಲಕೃಷ್ಣ ದೇವರಿಗೆ ಲಕ್ಷ ಪ್ರದಕ್ಷಿಣೆ

ಬ್ರಹ್ಮಾವರ: ಉಡುಪಿ ಜಿಲ್ಲಾ ಸೋಮಕ್ಷತ್ರೀಯ ಗಾಣಿಗ ಸಮಾಜ ಮೂಡುಕೇರಿ ಬಾರಕೂರು ಶ್ರೀವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ಅಧಿಕ ಜೇಷ್ಠ ಮಾಸ ಪ್ರಯುಕ್ತ ಲಕ್ಷ ಪ್ರದಕ್ಷಿಣೆ ಸೇವೆ ಮೇ 28 ರಂದು ಆರಂಭಗೊಂಡು ಜೂನ್ 14 ರಂದು ಭಾನುವಾರ ಉದ್ಯಾಪನಾ ಹೋಮದೊಂದಿಗೆ ಮುಕ್ತಾಯಗೊಂಡಿತು.

ಆರಂಭದ ದಿನದಿಂದ ಇಂದಿನ ತನಕ ಕಾಸರಗೋಡುವಿನಿಂದ ಶಿವಮೊಗ್ಗ ತನಕ ಸಹಸ್ರಾರು ಮಂದಿ ಪ್ರದಕ್ಷಿಣೆ ಸೇವೆಯಲ್ಲಿ ಭಾಗವಹಿಸಿ ಒಂದೂವರೆ ಲಕ್ಷಕ್ಕೂ ಅಧಿಕ ಪ್ರದಕ್ಷಿಣೆ ಮಾಡಿ ಶ್ರೀ ವೇಣುಗೋಪಾಲ ಕೃಷ್ಣ ದೇವರಿಗೆ ಭಕ್ತಿಯ ಸೇವೆ ಸಲ್ಲಿಸಿದರು.

ದೇವಸ್ಥಾನದ ತಂತ್ರಿ ಶ್ರೀಕಾಂತ ಸಾಮಗ ಅವರಿಂದ ನಡೆದ ಧಾರ್ಮಿಕ ವಿಧಿ ವಿಧಾನಕ್ಕೆ ಅಧ್ಯಕ್ಷ ಉಡುಪಿ ಉದಯ ಕುಮಾರ್‌ ಮತ್ತು ಶ್ವೇತಾ ದಂಪತಿ ಸಂಕಲ್ಪ ಪೂಜೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ದೇವಸ್ಥಾನದ ನಾನಾ ಸೇವೆ ನೀಡಿದವರನ್ನು ದೇವಸ್ಥಾನದ ವತಿಯಿಂದ ಗೌರವಿಸಲಾಯಿತು.

ಉಪಾಧ್ಯಕ್ಷ ರಾಮಕೃಷ್ಣ ಗಾಣಿಗ ಹಾರಾಡಿ, ಕಾರ್ಯದರ್ಶಿ ನಾಗರಾಜ ಗಾಣಿಗ ಸಾಲಿಗ್ರಾಮ, ಕೋಶಾಧಿಕಾರಿ ವಾಸುದೇವ ಬೈಕಾಡಿ, ಸುರೇಶ್ ಶೇವಧಿ, ಮಹಿಳಾ ಸಂಘದ ಅಧ್ಯಕ್ಷೆ ಜಯಂತಿ ವಾಸುದೇವ್ ಮತ್ತು ನಾನಾ ಸಮಿತಿಯ ಪದಾಧಿಕಾರಿಗಳು ನೇತೃತ್ವ ವಹಿಸಿದ್ದರು. ಪೂಜೆಯ ಬಳಿಕ ಸಹಸ್ರಾರು ಮಂದಿ ಅನ್ನ ಸಂತರ್ಪಣೆಯಲ್ಲಿ ಭಾಗವಹಿಸಿದರು.

-ಶಿವರಾಮ ಆಚಾರ್ಯ, ಪಬ್ಲಿಕ್ ನೆಕ್ಸ್ಟ್ ಬ್ರಹ್ಮಾವರ

Edited By : Shivu K
PublicNext

PublicNext

14/06/2026 09:00 pm

Cinque Terre

10.93 K

Cinque Terre

0