ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅನಂತ್ ಅಂಬಾನಿ ಭಕ್ತಿಯ ಯಾತ್ರೆ : ಉಡುಪಿ ಕೃಷ್ಣ, ಕೊಲ್ಲೂರು ಮೂಕಾಂಬಿಕೆ ದರ್ಶನ!

ಉಡುಪಿ: ಉಡುಪಿ ಶ್ರೀ ಕೃಷ್ಣ ಮಠಕ್ಕೆ ರಿಲಯನ್ಸ್ ಸಮೂಹ ಸಂಸ್ಥೆಗಳ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಅನಂತ್ ಅಂಬಾನಿ ಭೇಟಿ ನೀಡಿದರು.ರಾತ್ರಿ ಮಠಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.ಬಳಿಕ ಪರ್ಯಾಯ ಪೀಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಂದ ಫಲ ಮಂತ್ರಾಕ್ಷತೆ ಪಡೆದುಕೊಂಡರು.

ಈ ಸಂದರ್ಭದಲ್ಲಿ ಶಿರೂರು ಮಠದ ದಿವಾನರಾದ ಉದಯ ಕುಮಾರ್ ಸರಳತ್ತಾಯ ಹಾಗೂ ಪಂಡಿತ್ ಚಂದ್ರಶೇಖರ ಶರ್ಮ, ಕರ್ನಾಟಕದ ರಿಲಯನ್ಸ್ ಜಿಯೋ ವ್ಯವಸ್ಥಾಪಕರು- ಧನಂಜಯ ಆರ್ ಶಿವನಂದನ ಯು ಎಸ್, ಮಾಧವ ಶಾನುಭಾಗ್, ಜಯಪ್ರಕಾಶ್ ಶೆಟ್ಟಿ ಉಮೇಶ್ ಶೆಟ್ಟಿ ಉದ್ಯಮಿಗಳು ಮುಂಬೈ ಉಪಸ್ಥಿತರಿದ್ದರು.

ಅದಕ್ಕೂ ಮುನ್ನ ಕೊಲ್ಲೂರು ಭೇಟಿ: ಕೃಷ್ಣಮಠಕ್ಕೆ ಭೇಟಿಗೂ ಮುನ್ನ ಅನಂತ್ ಅಂಬಾನಿ ಅವರು ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದರು.

Edited By : Vinayak Patil
PublicNext

PublicNext

15/06/2026 08:38 am

Cinque Terre

9.26 K

Cinque Terre

1