ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ. ಸೋಮವಾರ ಮುಂಜಾನೆ ಕೊಚ್ಚಿಯ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇಗುಲದಲ್ಲಿ ಪವಿತ್ರ ಮಾಲೆ ಧರಿಸಿ ಅವರು ಯಾತ್ರೆಯನ್ನು ಆರಂಭಿಸಿದರು. ರಾತ್ರಿ 8 ಗಂಟೆಗೆ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲಿರುವ ಕುಮಾರಸ್ವಾಮಿ, ಬಳಿಕ ಸುಮಾರು ಎರಡು ಗಂಟೆಗಳ ಕಾಲ ಪಡಿಪೂಜೆ ಸೇರಿದಂತೆ ವಿಶೇಷ ಪೂಜೆಗಳನ್ನು ಸಲ್ಲಿಸಲಿದ್ದಾರೆ. ಅವರೊಂದಿಗೆ ಮಾಜಿ ಸಚಿವರಾದ ಸಾ. ರಾ. ಮಹೇಶ್, ಸಿ.ಎಸ್. ಪುಟ್ಟರಾಜು, ಜೆಡಿಎಲ್‌ಪಿ (JDLP) ನಾಯಕ ಸುರೇಶ್ ಬಾಬು, ಎಂಎಲ್‌ಸಿ (MLC) ಭೋಜೇಗೌಡ ಸೇರಿ ಒಟ್ಟು 30 ಭಕ್ತರ ತಂಡ ಶಬರಿಮಲೆಗೆ ತೆರಳಿದೆ.
PublicNext
15/06/2026 12:21 pm
LOADING...