ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾರ್ವಜನಿಕರಿಗೆ ಉಡಾಪೆ ಉತ್ತರ ನೀಡಿದ ತಾಲ್ಲೂಕು ಭೂಮಾಪಕ ವಿ. ಜಿ. ಸುರೇಂದ್ರಕುಮಾರ್ ಎತ್ತಂಗಡಿ

ತುಮಕೂರು: ಸಾರ್ವಜನಿಕರ ದೂರುಗಳಿಗೆ ಸಕಾಲದಲ್ಲಿ ಸ್ಪಂದಿಸದೇ,ತಾಲ್ಲೂಕು ಮಟ್ಟದ ಅರ್ಜಿಗಳನ್ನು ವಿಲೇವಾರಿ ಮಾಡದೆ ವಿಳಂಬ ಮಾಡುತ್ತಿದ್ದ ಹಾಗೂ ಸಾರ್ವಜನಿಕರೊಂದಿಗೆ ಉಡಾಫೆಯಿಂದ ವರ್ತಿಸುತ್ತಿದ್ದ ತುಮಕೂರು ತಾಲ್ಲೂಕು ಭೂಮಾಪಕ ವಿ. ಜಿ. ಸುರೇಂದ್ರ ಕುಮಾರ್ ಅವರನ್ನು ಸಾರ್ವಜನಿಕರ ದೂರಿನ ಮೇರೆಗೆ ಭೂ ಮಾಪನಾ ಇಲಾಖೆ ಉಪನಿರ್ದೇಶಕರು ಪಾವಗಡಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ಸಾಮಾಜಿಕ ಹೋರಾಟಗಾರ ಡಿ.ಪಿ.ತಿಮ್ಮರಾಜು ತುಮಕೂರು ತಾಲ್ಲೂಕು ಕಚೇರಿಗೆ ಮನವಿಸಲ್ಲಿಸಿ ಸುರೇಂದ್ರಕುಮಾರ್ ರವರು ಸಾರ್ವಜನಿಕರಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸದೇ ಹಲವು ಸರ್ಕಾರಿ ಭೂಮಿಗಳ ವರದಿಗಳನ್ನು ಸಕಾಲದಲ್ಲಿ ವರದಿ ನೀಡದೇ ಅನ್ಯ ಕಾಲವಿಳಂಬ ಮಾಡುತ್ತಿದ್ದು ಇವರು ಸಾರ್ವಜನಿಕ ದೂರವಾಣಿಯನ್ನು ಸ್ವೀಕರಿಸದೇ ತಮ್ಮ ಕರ್ತವ್ಯಲೋಪಮಾಡುತ್ತಿದ್ದು ಸದರಿಯವರಿಗೆ ಕಚೇರಿಯಿಂದ ವಿಲೇವಾರಿಯಾಗಿರುವ ತಾಲ್ಲೂಕು ಮಟ್ಟದ, ಅರ್ಜಿಗಳು ತಮ್ಮಲ್ಲಿಯೇ ಇಟ್ಟುಕೊಂಡು ಸಾರ್ವಜನಿಕರು ವಿಚಾರಣೆ ಮಾಡಿದಾಗ ಉಡಾಫೆ ಉತ್ತರಗಳನ್ನು ನೀಡುತ್ತಾ ಬರುತ್ತಿದ್ದು ಇವರನ್ನು ತಕ್ಷಣದಿಂದ ವರ್ಗಾವಣೆ ಅಥವಾ ಅಮಾನತ್ತು ಮಾಡಲು ಕೋರಿರುತ್ತಾರೆ.

ಸಾರ್ವಜನಿಕ ಕಚೇರಿಯಲ್ಲಿ ಸಾರ್ವಜನಿಕರ ಮನವಿಗಳನ್ನು ಸ್ವೀಕರಿಸಿ ಸರ್ಕಾರಿ ಕೆಲಸದಲ್ಲಿ ನಿರ್ಲಕ್ಷ್ಯತೆ ಹಾಗೂ ಬೇಜವಾಬ್ದಾರಿತನದಿಂದ ವರ್ತಿಸಿ ಮೇಲಾಧಿಕಾರಿಗಳ ಆದೇಶಗಳನ್ನು ಉಲ್ಲಂಘಿಸಿ, ಕಚೇರಿ ಕೆಲಸದಲ್ಲಿ ಅನಗತ್ಯ ವಿಳಂಬಧೋರಣೆಮಾಡಿ ಸಾರ್ವಜನಿಕರಿಗೆ ತೊಂದರೆಯೂಂಟು ಮಾಡಿರುವ ಕಾರಣ ಶ್ರೀ ಸುರೇಂದ್ರ ಕುಮಾರ್ ವಿ ಜಿ ಭೂಮಾಪಕರ ಉಲ್ಲೇಖ(03)ರ ನಿಯೋಜನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿ ಆದೇಶಿಸಿದೆ ಹಾಗೂ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಮುಂದಿನ ಆದೇಶದವರೆಗೆ ಶ್ರೀ ಸುರೇಂದ್ರ ಕುಮಾರ್ ವಿ ಜಿ ಭೂಮಾಪಕರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಾವಗಡ ತಾಲ್ಲೂಕು ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ನಿಯೋಜಿಸಿ ಉಪನಿರ್ದೇಶಕರು ಆದೇಶಿಸಿದ್ದಾರೆ.

Edited By :
Kshetra Samachara

Kshetra Samachara

16/06/2026 07:58 pm

Cinque Terre

940

Cinque Terre

0

ಸಂಬಂಧಿತ ಸುದ್ದಿ