ಮಂಗಳೂರು: ನಾಲ್ವರು ಮುಸ್ಲಿಂ ಹೆಣ್ಣುಮಕ್ಕಳಿದ್ದ ಸ್ಕೂಟರ್ ಒಂದು ಪಾರ್ಕ್ ಮಾಡಿದ್ದ ವಾಹನಕ್ಕೆ ಡಿಕ್ಕಿಯಾದ ಘಟನೆ ಮಂಗಳವಾರ ರಾತ್ರಿ 9.15ರ ಸುಮಾರಿಗೆ ಮಂಗಳೂರು ನಗರದ ಹೊರವಲಯದ ತೊಕ್ಕೊಟ್ಟು ಎಂಬಲ್ಲಿ ನಡೆದಿದೆ. ಹೆಣ್ಣು ಮಕ್ಕಳ ಹುಚ್ಚಾಟದ ವೀಡಿಯೋ ಇದೀಗ ವೈರಲ್ ಆಗಿದೆ.
ಉಳ್ಳಾಲ ಮೇಲಂಗಡಿಯಿಂದ ಟಿ.ಸಿ.ರೋಡ್ ಮಾರ್ಗವಾಗಿ ತೊಕ್ಕೊಟ್ಟು ಒಳಪೇಟೆಗೆ ಈ ಮುಸ್ಲಿಂ ಹೆಣ್ಣು ಮಕ್ಕಳು ಸ್ಕೂಟರ್‌ನಲ್ಲಿ ಬಂದಿದ್ದರು. ತೊಕ್ಕೊಟ್ಟು ಒಳಪೇಟೆಯ ಎಬಿಸಿ ಕ್ಲಬ್ ಬಳಿ ಬರುತ್ತಿದ್ದಂತೆ ರಸ್ತೆಯ ಹಂಪ್ಸ್ ದಾಟುವಾಗ ನಿಯಂತ್ರಣ ಕಳೆದುಕೊಂಡ ಸ್ಕೂಟರ್ ರಸ್ತೆ ಬದಿ ಪಾರ್ಕ್ ಮಾಡಿದ್ದ ವಾಹನಗಳಿಗೆ ಡಿಕ್ಕಿಯಾಗಿದೆ. ಸ್ಕೂಟರ್ ಬಿದ್ದ ರಭಸಕ್ಕೆ ಭಾರೀ ಶಬ್ದವಾದ ಪರಿಣಾಮ ಎಬಿಸಿ ಕ್ಲಬ್ ಬಳಿಯಿದ್ದ ಯುವಕರು ಗಾಬರಿಬಿದ್ದು ಹೊರಬಂದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಶೇಷವೆಂದರೆ ನಾಲ್ಕಕ್ಕೆ ನಾಲ್ಕೂ ಮಂದಿ ಹೆಣ್ಣು ಮಕ್ಕಳೂ ಹೆಲ್ಮೆಟ್ ಧರಿಸದೆ ಸ್ಕೂಟರಲ್ಲಿ ಸವಾರಿ ಮಾಡಿದ್ದಾರೆ.
ಘಟನೆಯ ಬಗ್ಗೆ ಈವರೆಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ
PublicNext
17/06/2026 06:46 pm
LOADING...