ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಿಯ್ಯಾರು ಜೋಡುಕಟ್ಟೆ: ಬಸ್-ರಿಕ್ಷಾ ಭೀಕರ ಡಿಕ್ಕಿ; ಚಾಲಕ ಗಂಭೀರ, ರಿಕ್ಷಾ ನಜ್ಜುಗುಜ್ಜು

ಕಾರ್ಕಳ : ಖಾಸಗಿ ಬಸ್‌ ಮತ್ತು ರಿಕ್ಷಾ ನಡುವೆ ಡಿಕ್ಕಿಯಾದ ಘಟನೆ ಜೂ. 19ರಂದು ಬೆಳಿಗ್ಗೆ ಮಿಯ್ಯಾರು ಜೋಡುಕಟ್ಟೆಯಲ್ಲಿ ನಡೆದಿದೆ.

ಬಜಗೋಳಿಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಬಸ್‌ ಮತ್ತು ಅದೇ ರಸ್ತೆಯಲ್ಲಿ ಮುಂಭಾಗದಲ್ಲಿ ಬರುತ್ತಿದ್ದ ರಿಕ್ಷಾ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಪರಿಣಾಮವಾಗಿ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬಸ್‌ನ ಮುಂಭಾಗ ಜಖಂಗೊಂಡಿರುತ್ತದೆ. ಗಾಯಾಳು ರಿಕ್ಷಾ ಚಾಲಕ ಚಂದ್ರಕಾಂತ್‌ ಶೆಣೈ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆ ದಾಖಲಿಸಲಾಗಿದೆ.

ಅವೈಜ್ಞಾನಿಕ ರಸ್ತೆ ತಿರುವು ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ದೂರುತ್ತಿದ್ದಾರೆ. ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ವರದಿ : ಮಂಜು ಶೆಟ್ಟಿ ಸಾಣೂರು ಪಬ್ಲಿಕ್ ನೆಕ್ಸ್ಟ್ ಕಾರ್ಕಳ

Edited By : Nirmala Aralikatti
PublicNext

PublicNext

19/06/2026 01:50 pm

Cinque Terre

7.93 K

Cinque Terre

0

ಸಂಬಂಧಿತ ಸುದ್ದಿ