ಬಂಟ್ವಾಳ: ತಾಂತ್ರಿಕ ತೊಂದರೆಯಿಂದ ನಿಂತಿದ್ದ ಟಿಪ್ಪರ್ ಲಾರಿಯೊಂದು ಏಕಾಏಕಿ ಹಿಂದಕ್ಕೆ ಚಲಿಸಿದ ಪರಿಣಾಮ ದುರಸ್ತಿ ಮಾಡಲು ಲಾರಿಯಡಿ ಹೋಗಿದ್ದ ಚಾಲಕ ಚಕ್ರದಡಿ ಸಿಲುಕಿ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಪಾದೆಕಲ್ಲು ಪೆರುವಡಿ ಗುಡ್ಡದಲ್ಲಿ ಗುರುವಾರ ಸಂಭವಿಸಿದೆ.
ಬೆಳ್ತಂಗಡಿ ತಾಲೂಕಿನ ಬಂದಾರು ನಿವಾಸಿ ಮಹೇಶ್ ಮೃತಪಟ್ಟ ಚಾಲಕ.
ಪೆರುವಡಿ ಸರವು ಗುಡ್ಡದಲ್ಲಿ ಲಾರಿಗಳಲ್ಲಿ ಹೊರರಾಜ್ಯಕ್ಕೆ ಮಣ್ಣು ಸಾಗಾಟ ನಡೆಯುತ್ತಿತ್ತು. ಬೆಳಗ್ಗೆ 10 ಗಂಟೆಗೆ ಅಲ್ಲಿ ಮಣ್ಣು ತೆರವುಗೊಳಿಸುತ್ತಿದ್ದ ಸಂದರ್ಭ ಮಹೇಶ್ ಚಲಾಯಿಸುತ್ತಿದ್ದ ಟಿಪ್ಪರ್ ಲಾರಿಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಚಾಲಕ ಮಹೇಶ್ ಲಾರಿಯಡಿಗೆ ಹೋಗಿ ದುರಸ್ತಿಗೊಳಿಸುತ್ತಿದ್ದರು. ಈ ವೇಳೆ ಲಾರಿ ಏಕಾಏಕಿ ಹಿಂದಕ್ಕೆ ಚಲಿಸಿದೆ. ಪರಿಣಾಮ ಚಾಲಕ ಮಹೇಶ್ ಮುಂದಿನ ಚಕ್ರದಡಿಗೆ ಸಿಲುಕಿ ದಾರುಣವಾಗಿ ಮೃತಪಟ್ಟರು.
ತಕ್ಷಣ ಸ್ಥಳದಲ್ಲಿದ್ದ ಕಾರ್ಮಿಕರು ಹಾಗೂ ಕನ್ಯಾನದ ಸದ್ಗುರು ಅಂಬ್ಯುಲೆನ್ಸ್ ಚಾಲಕರು ಕಾರ್ಯಾಚರಣೆ ನಡೆಸಿ, ಲಾರಿಯಡಿಯಿಂದ ಮೃತದೇಹವನ್ನು ಮೇಲಕ್ಕೆತ್ತಿ ವಿಟ್ಲದ ಸರಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ.
Kshetra Samachara
18/06/2026 10:20 pm
LOADING...