ಚಾಮರಾಜನಗರ : ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಗಡಿ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರಬೆಟ್ಟದ ಮಾದಪ್ಪನ ಸನ್ನಿಧಿಯ ಹುಂಡಿಯಲ್ಲಿ ಸಂಗ್ರಹವಾದ ಹಣ ಎಣಿಕೆ ನಡೆದಿದ್ದು, ದಾಖಲೆಯ 2.73 ಕೋಟಿ ರೂ.ಸಂಗ್ರಹವಾಗಿದೆ.
ಶ್ರೀ ಕ್ಷೇತ್ರ ಮಲೆ ಮಹದೇಶ್ವರಬೆಟ್ಟದ ಪ್ರಾಧಿಕಾರದ ಕಚೇರಿಯಲ್ಲಿ ಸಾಲೂರು ಬೃಹನ್ಮಠಾಧ್ಯಕ್ಷ ಶಾಂತಮಲ್ಲಿಕಾರ್ಜುನಸ್ವಾಮಿ ಹಾಗೂ ಮಲೆ ಮಹದೇಶ್ವರಸ್ವಾಮಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿ ಕ್ಯಾಮರಾ ಕಣ್ಣಾವಲು ಹಾಗೂ ಪೊಲೀಸ್ ಬಂದೋಬಸ್ತ್ ನಲ್ಲಿ ಎಣಿಕೆ ಕಾರ್ಯಪ್ರಾರಂಭ ಮಾಡಲಾಯಿತು.
ಕೇವಲ 27 ದಿನಗಳಲ್ಲಿ 2,73,57,105 ರೂ. ಸಂಗ್ರಹವಾಗಿದ್ದು, ಭಕ್ತಾದಿಗಳು ಮಾದಪ್ಪನಿಗೆ ಹಣದ ರೂಪದಲ್ಲಿ ಭಕ್ತಿಯ ಹೊಳೆಯನ್ನೇ ಹರಿಸಿದ್ದಾರೆ. ಇಷ್ಟೇ ಅಲ್ಲದೆ 44ಗ್ರಾಂ ಚಿನ್ನ ಮತ್ತು 977 ಗ್ರಾಂ ಬೆಳ್ಳಿಯನ್ನು ಭಕ್ತರು ಕಾಣಿಕೆಯ ರೂಪದಲ್ಲಿ ದೇವರಿಗೆ ಅರ್ಪಿಸಿದ್ದಾರೆ.
ವಿಶೇಷ ದಿನಗಳು, ಅಮಾವಾಸ್ಯೆ ದಿನಗಳು, ಇತರೆ ರಜೆದಿನಗಳು ಹಾಗೂ ದೀಪದ ಒಡ್ದುವಿನಲ್ಲಿ ನಿರ್ಮಾಣಗೊಂಡಿರುವ ಮಾದಪ್ಪನ ಬೃಹತ್ ಪ್ರತಿಮೆಯ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ಅಲ್ಲದೆ ವಿದೇಶಿ ಭಕ್ತರು ಮಾದಪ್ಪನಿಗೆ ಹರಕೆಯ ರೂಪದಲ್ಲಿ ನಗದು ಮತ್ತು ಚಿನ್ನಾಭರಣಗಳನ್ನು ಸಲ್ಲಿಸಿದ್ದಾರೆ.
Kshetra Samachara
18/06/2026 09:30 am
LOADING...