ಗುಂಡ್ಲುಪೇಟೆ : ಸಫಾರಿ ವಾಹನವನ್ನು ಬೆನ್ನಟ್ಟಿದ ಸಲಗ ದಾಳಿಗೆ ಮುಂದಾದ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದ್ದು ಕೂದಲೆಳೆ ಅಂತರದಲ್ಲಿ ಪ್ರವಾಸಿಗರು ಬಚಾವಾಗಿದ್ದಾರೆ.
ಈ ದೃಶ್ಯ ಕಂಡುಬಂದಿದ್ದು ಪ್ರತಿಷ್ಠಿತ ಹುಲಿ ರಕ್ಷಿತಾರಣ್ಯ ಬಂಡೀಪುರದಲ್ಲಿ, ಪ್ರವಾಸಿಗರನ್ನು ಕರೆದೊಯ್ದಿದ್ದ ಜೀಪ್ ಮೇಲೆ ಮುಗಿಬಿದ್ದ ಸಲಗ ಒಮ್ಮೆಲೇ ದಾಳಿಗೆ ಮುಂದಾದ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸದ್ಯ ವನ್ಯಜೀವಿಗಳು ಕಾಣಿಸಿಕೊಂಡಾಗ ಅಂತರ ಕಾಯ್ದುಕೊಳ್ಳುವುದು ಒಳ್ಳೆಯದು ಇಲ್ಲವಾದರೆ ಇಂತಹ ಅಪಾಯಕಾರಿ ಘಟನೆಗಳು ಸಂಭವಿಸುತ್ತವೆ, ವನ್ಯಜೀವಿಗಳಿಗೆ ಕಿರಿಕಿರಿಯಾಗುವಂತಹ ವಾತಾವರಣ ಸೃಷ್ಟಿಯಾದಾಗ ದಾಳಿಗೆ ಮುಂದಾಗುತ್ತವೆ ಎಂದು ವನ್ಯಜೀವಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಶಿವಕುಮಾರ್ ಪಬ್ಲಿಕ್ ನೆಕ್ಸ್ಟ್ ಗುಂಡ್ಲುಪೇಟೆ
PublicNext
20/06/2026 10:13 am
LOADING...