ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಮರಾಜನಗರ : ಅಭಿವೃದ್ಧಿ ಪ್ರಾಧಿಕಾರದ ನಿರ್ಲಕ್ಷ್ಯ - ಆನೆಗಳು ಪ್ಲಾಸ್ಟಿಕ್ ವಸ್ತುಗಳನ್ನು ತಿನ್ನುವ ಪರಿಸ್ಥಿತಿ ನಿರ್ಮಾಣ

ಚಾಮರಾಜನಗರ : ಮಲೆ ಮಹದೇಶ್ವರ ಬೆಟ್ಟದಲ್ಲಿ ಉತ್ಪತ್ತಿಯಾಗುತ್ತಿರುವ ಕಸದ ರಾಶಿಯನ್ನು ಮಲೆ ಮಹದೇಶ್ವರಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಸ ವಿಲೇವಾರಿ ಮಾಡದೆ ಕಾಡಂಚಿನಲ್ಲಿ ತಂದು ಸುರಿಯುವ ಕೆಲಸ ಮಾಡುತ್ತಿದೆ.

ಕಾಡಿನಿಂದ ನಿತ್ಯವೂ ಆಹಾರ ಆರಿಸಿ ಇಲ್ಲಿಗೆ ಬರುವ ಕಾಡುಪ್ರಾಣಿಗಳು ಆಹಾರವೆಂದು ಕಸದ ರಾಶಿಯಲ್ಲಿ ಇರುವ ಪ್ಲಾಸ್ಟಿಕ್ ವಸ್ತುಗಳನ್ನು ತಿನ್ನುತ್ತಿವೆ. ಇದರಿಂದ ಕಾಡು ಪ್ರಾಣಿಗಳ ಜೀವಕ್ಕೆ ಕಂಟಕವಾಗಿದೆ.

ಪ್ರಾಧಿಕಾರ ಕಾಡಂಚಿನಲ್ಲಿರುವ ತನ್ನದೇ ಜಾಗದಲ್ಲಿ ಈ ಕಸದ ರಾಶಿಯನ್ನು ಸುರಿಯುತ್ತಿದೆ. ಆದರೂ ಸಹ ಈ ಜಾಗಕ್ಕೆ ಸುತ್ತಲೂ ಕಾಂಪೌಂಡ್ ನಿರ್ಮಿಸುವ ಕೆಲಸ ಮಾಡಿಲ್ಲ. ಹೀಗಾಗಿ ಕಾಡು ಪ್ರಾಣಿಗಳು ನಿತ್ಯವೂ ಇಲ್ಲಿಗೆ ಬಂದು ಕಸದ ರಾಶಿಯನ್ನು ತಿನ್ನುವ ಕೆಲಸ ಮಾಡುತ್ತಿದೆ.

ಪ್ರಾಧಿಕಾರದ ನಿರ್ಲಕ್ಷ್ಯದಿಂದ ಕಸದ ರಾಶಿಯಿಂದ ಕಾಡು ಪ್ರಾಣಿಗಳ ಜೀವಕ್ಕೆ ಕಂಟಕವಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಯು ಸಹ ನಿರ್ಲಕ್ಷ್ಯ ವಹಿಸಿದೆ.

Edited By : Vinayak Patil
PublicNext

PublicNext

14/06/2026 05:10 pm

Cinque Terre

9.8 K

Cinque Terre

1

ಸಂಬಂಧಿತ ಸುದ್ದಿ