ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುಂಡ್ಲುಪೇಟೆ : ಬಂಡೀಪುರದ ಸಫಾರಿ ಹಾದಿಯಲ್ಲಿ ವಿಶ್ರಾಂತಿಗೆ ಜಾರಿದ ಹೆಬ್ಬುಲಿ

ಗುಂಡ್ಲುಪೇಟೆ : ಬಂಡೀಪುರದ ಸಫಾರಿ ಮಾರ್ಗದಲ್ಲಿ ರಸ್ತೆಗೆ ಅಡ್ಡಲಾಗಿ ವಿಶ್ರಾಂತಿಗೆ ಜಾರಿದ್ದ ಹೆಬ್ಬುಲಿಯು ವನ್ಯಜೀವಿಪ್ರಿಯರಿಗೆ ಸನಿಹದಲ್ಲೇ ದರ್ಶನ ನೀಡಿದ್ದು ಪ್ರವಾಸಿಗರು ಹುಲಿಯ ಗಾಂಭೀರ್ಯ ದೃಶ್ಯವನ್ನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮೃಗಾಲಯದಲ್ಲಿ ಹುಲಿಯನ್ನ ಕಣ್ತುಂಬಿಕೊಳ್ಳುತ್ತಿದ್ದ ಪ್ರವಾಸಿಗರಿಗೆ ಬಂಡೀಪುರದ ನಡುಗಾಡಿನಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿರುವ ಹುಲಿಗಳು ಹಾಗೂ ಚಿರತೆ, ಕರಡಿ ಆನೆಗಳ ಹಿಂಡನ್ನ ನೋಡಿ ಪುಳಕಿತರಾಗುತ್ತಿದ್ದಾರೆ, ಇತ್ತೀಚೆಗೆ ಬೆಳ್ಳಂಬೆಳಗ್ಗೆ , ಮಧ್ಯಾಹ್ನ ಸಂದರ್ಭದಲ್ಲಿ ಸಫಾರಿ ಪ್ರಿಯರಿಗೆ ರಗಡ್ ಲುಕ್ ನೀಡುತ್ತಿರುವ ವನ್ಯಜೀವಿಗಳು ಬಂಡೀಪುರಕ್ಕೆ ಆಗಮಿಸುವವರ ಸಂಖ್ಯೆಯನ್ನ ಹೆಚ್ಚಿಸಿಕೊಳ್ಳುತ್ತಿವೆ.

Edited By :
PublicNext

PublicNext

19/06/2026 02:57 pm

Cinque Terre

6.81 K

Cinque Terre

0

ಸಂಬಂಧಿತ ಸುದ್ದಿ