ಗುಂಡ್ಲುಪೇಟೆ : ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನ ಗ್ರಾಮ ಮಗುವಿನಹಳ್ಳಿಯ ರೈತರ ಜಮೀನಿನಲ್ಲಿ ಭಾರಿ ಗಾತ್ರದ ಹುಲಿ ಸಂಚರಿಸುತ್ತಿರುವುದನ್ನು ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಬಂಡೀಪುರದ ಮೇಲುಕಾಮನಹಳ್ಳಿ ಸಮೀಪದ ಮಗುವಿನಹಳ್ಳಿ ವ್ಯಾಪ್ತಿ ಅರಣ್ಯಕ್ಕೆ ಹೊಂದಿಕೊಂಡಿರುವ ರೈತನ ಜಮೀನಿನಲ್ಲಿ ಸುತ್ತಾಟ ನಡೆಸಿರುವ ವ್ಯಾಘ್ರನ ಚಲನ ವಲನವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿರುವ ಅಲ್ಲಿಯೇ ತುಸು ದೂರದಲ್ಲಿದ್ದಂತಹ ರೈತರು ಬೆಚ್ಚಿಬಿದ್ದಿದ್ದಾರೆ., ಭಾರಿ ಗಾತ್ರದ ಹುಲಿಯನ್ನು ನೋಡಿ ಜಮೀನುಗಳಿಗೆ ಕೆಲಸ ಕಾರ್ಯಗಳಿಗೆ ತೆರಳುವ ರೈತರು ಜಾಗರೂಕರಾಗಿರುವಂತೆ ಎಚ್ಚರಿಸಿದ್ದಾರೆ.
PublicNext
12/06/2026 08:00 pm
LOADING...