ಬ್ರಹ್ಮಾವರ: ಬಾರಕೂರು ಕೋಟೇಕೇರಿ ಶ್ರೀಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ನಾನಾ ಧಾರ್ಮಿಕ ಕಾರ್ಯಕ್ರಮದೊಂದಿಗೆ ಮುಷ್ಠಿಕಾಣಿಕೆ ಸಮರ್ಪಣೆ ಮತ್ತು ಮನವಿಪತ್ರ ಬಿಡುಗಡೆ ಬುಧವಾರ ಜರುಗಿತು.
ಬಳಿಕ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಕೋಟ ಶ್ರೀ ಅಮೃತೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಆನಂದ ಸಿ.ಕುಂದರ್ ಮಾತನಾಡಿ, ಪ್ರಾಚೀನ ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯದಲ್ಲಿ ಭಾಗವಹಿಸಲು ಪೂರ್ವಪುಣ್ಯ ಬೇಕು. ತುಳುನಾಡಿನ ಎಲ್ಲಾ ಸಮಾಜದವರ ಪ್ರಮುಖ ದೇವಸ್ಥಾನವಾದ ಬಾರಕೂರು ಶ್ರೀಪಂಚಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು. ಇದೇ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರದ ಮನವಿ ಪತ್ರ ಬಿಡುಗಡೆ ಮಾಡಲಾಯಿತು.
ಜೀರ್ಣೋದ್ಧಾರ ಸಮಿತಿಯ ಸುಗ್ಗಿ ಸುಧಾಕರ ಶೆಟ್ಟಿ,ಪದಾಧಿಕಾರಿಗಳು ಮತ್ತು ಅತಿಥಿಗಳಾದ ಆಕಾಶ್ ರಾಜ್ ಜೈನ್, ಮಂಜುನಾಥ್ ರಾವ್, ಬಾರಕೂರು ಶಾಂತಾರಾಮ ಶೆಟ್ಟಿ, ಚಂದ್ರ ಶೇಖರ ಶೆಟ್ಟಿ ನಡುಮನೆ, ಶ್ರೀನಿವಾಸ ಶೆಟ್ಟಿಗಾರ್, ಬಾರಕೂರು ಚರ್ಚ್ ಧರ್ಮಗುರು ರೋನಾಲ್ಡ್ ಮಿರಾಂಡಾ, ಸುಧಾಕರ ಸೂರಾಲು,ವಿಜಯ ಶೆಟ್ಟಿ ಅವರಾಲು, ರಮೇಶ್ ಭಟ್ ನಾಯರ ಬೆಟ್ಟು,ಸಂಪತ್ ಕುಮಾರ್ ಶೆಟ್ಟಿ, ಅಣ್ಣಯ್ಯ ಶೇರಿಗಾರ್ ಬಾರಕೂರು,ಮುನಿಯಾಲು ಉದಯ ಕುಮಾರ್ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು.
PublicNext
18/06/2026 07:13 pm
LOADING...