ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉದ್ಧವ್‌ಗೆ ಮತ್ತೊಂದು ದೊಡ್ಡ ಆಘಾತ : 16 ಶಾಸಕರನ್ನ ಸೆಳೆಯಲು ಶಿಂಧೆ ಗ್ಯಾಂಗ್ ಪ್ರಯತ್ನ

ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ - UBT) ಪಕ್ಷದೊಳಗಿನ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದೆ. 6 ಲೋಕಸಭಾ ಸಂಸದರು ಪ್ರತ್ಯೇಕ ಬಣವಾಗಿ ಗುರುತಿಸುವಂತೆ ಸ್ಪೀಕರ್‌ಗೆ ಪತ್ರ ಬರೆದಿದ್ದು, ಇದರ ಬೆನ್ನಲ್ಲೇ ಡಿಸಿಎಂ ಏಕನಾಥ್‌ ಶಿಂಧೆ ಬಣವು ಉದ್ಧವ್‌ ಬಣದ ಶಾಸಕರನ್ನು ತಮ್ಮತ್ತ ಸೆಳೆಯುವ ತೀವ್ರ ಪ್ರಯತ್ನದಲ್ಲಿದೆ.

ಶಿವಸೇನೆ (UBT) ಬಣವು ವಿಧಾನಸಭೆಯಲ್ಲಿ 20 ಶಾಸಕರನ್ನು ಮತ್ತು ವಿಧಾನ ಪರಿಷತ್‌ನಲ್ಲಿ 6 ಸದಸ್ಯರನ್ನು ಹೊಂದಿದೆ. ಪ್ರಸ್ತುತ, ವಿಧಾನಸಭೆಯ 20 ಶಾಸಕರ ಪೈಕಿ 16 ಮಂದಿ ಬಂಡಾಯ ಏಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಇವರನ್ನು ತಮ್ಮ ಬಣಕ್ಕೆ ಸೆಳೆಯಲು ಶಿಂಧೆ ಬಣ ತೀವ್ರ ಕಾರ್ಯತಂತ್ರ ರೂಪಿಸಿದೆ.

ಒಟ್ಟಾರೆ, ವಿಧಾನಸಭೆಯ ಮುಂಗಾರು ಅಧಿವೇಶನ ನಡೆಯುತ್ತಿರುವಾಗಲೇ ಈ ರಾಜಕೀಯ ಕ್ಷಿಪ್ರಕ್ರಾಂತಿ ನಡೆಯುತ್ತಿದೆ. ಈಗಾಗಲೇ 9 ಸಂಸದರ ಪೈಕಿ 6 ಮಂದಿ ಉದ್ಧವ್ ಬಣದಿಂದ ದೂರ ಸರಿದಿರುವುದು ಬಿಕ್ಕಟ್ಟಿನ ತೀವ್ರತೆಯನ್ನು ಎತ್ತಿ ತೋರಿಸಿದೆ.

Edited By :
PublicNext

PublicNext

19/06/2026 12:06 pm

Cinque Terre

8.88 K

Cinque Terre

0

ಸಂಬಂಧಿತ ಸುದ್ದಿ