ಮಂಡ್ಯ: ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಕೆ.ಆರ್. ನಂದಿನಿ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಸಿಇಒ ಯಾವುದೇ ಅಪಾಯವಿಲ್ಲದೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಈ ಘಟನೆ ಮಂಡ್ಯ ನಗರದಲ್ಲಿರುವ ಸಿಇಒ ಅವರ ಸರ್ಕಾರಿ ನಿವಾಸದ ಮುಂಭಾಗದಲ್ಲಿ ಮಧ್ಯಾಹ್ನ ಸಂಭವಿಸಿದೆ. ಸಿಇಒ ನಂದಿನಿ ಅವರು ಊಟ ಮುಗಿಸಿ ತಮ್ಮ ಕಚೇರಿಗೆ ತೆರಳುತ್ತಿದ್ದಾಗ, ಅವರ ಕಾರು ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅಪಘಾತದ ರಭಸಕ್ಕೆ ಸಿಇಒ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡು, ಒಂದು ಟೈರ್ ಸ್ಫೋಟಗೊಂಡಿದೆ.
ಘಟನೆಯ ಬಳಿಕ, ಸಿಇಒ ನಂದಿನಿ ಅವರು ಯಾವುದೇ ತೊಂದರೆಗೆ ಒಳಗಾಗದೆ, ಮತ್ತೊಂದು ವಾಹನದಲ್ಲಿ ಕಚೇರಿಗೆ ತೆರಳಿದರು. ಈ ಸಂಬಂಧ ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
PublicNext
19/06/2026 06:25 pm
LOADING...