ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಚೂರು: ಮನೆ ಮುಂದೆ ಆಟವಾಡುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿಗಳ ಭೀಕರ ದಾಳಿ!

ರಾಯಚೂರು: ರಾಯಚೂರು ತಾಲೂಕಿನ ಮಲಿಯಾಬಾದ್ ಗ್ರಾಮದಲ್ಲಿ ಮನೆ ಮುಂದೆ ನಿರಾತಂಕವಾಗಿ ಆಟವಾಡುತ್ತಿದ್ದ ನಾಲ್ಕು ವರ್ಷದ ಮಾಸೂಮ್ ಬಾಲಕನ ಮೇಲೆ ಬೀದಿ ನಾಯಿಗಳ ಹಿಂಡು ಭೀಕರವಾಗಿ ದಾಳಿ ನಡೆಸಿದ ಅಘಾತಕಾರಿ ಘಟನೆ ನಡೆದಿದೆ. ನಾಯಿಗಳ ರಕ್ತಸಿಕ್ತ ದಾಳಿಯಿಂದಾಗಿ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.

ಮಲಿಯಾಬಾದ್ ಗ್ರಾಮದ ನಿವಾಸಿ ವೇಣುಗೋಪಾಲ್ (4) ಬೀದಿ ನಾಯಿಗಳ ಕೆಂಗಣ್ಣಿಗೆ ಬಿದ್ದ ಬಾಲಕ. ಸಂಜೆಯ ವೇಳೆ ಮನೆಮುಂದೆ ಆಟವಾಡುತ್ತಿದ್ದಾಗ ಏಕಾಏಕಿ ಎರಗಿದ ಬೀದಿ ನಾಯಿಗಳು ಬಾಲಕನ ತಲೆಯ ಭಾಗವನ್ನು ಸಂಪೂರ್ಣವಾಗಿ ಕಚ್ಚಿ ಶ್ರೇಣೀಕೃತ ಗಾಯಗಳನ್ನು ಉಂಟುಮಾಡಿದೆ. ಬಾಲಕನ ಚೀರಾಟ ಕೇಳಿ ಓಡಿಬಂದ ಸ್ಥಳೀಯರು ಹಾಗೂ ಪೋಷಕರು ತಕ್ಷಣವೇ ನಾಯಿಗಳನ್ನು ಬೆದರಿಸಿ ಮಗುವನ್ನು ರಕ್ಷಿಸಿದ್ದಾರೆ.

ರಕ್ತಸ್ರಾವದಿಂದ ತೀವ್ರ ಅಸ್ವಸ್ಥಗೊಂಡಿದ್ದ ಬಾಲಕ ವೇಣುಗೋಪಾಲ್‌ನನ್ನು ತಕ್ಷಣವೇ ರಾಯಚೂರು ನಗರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಸದ್ಯ ಬಾಲಕನಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಭೀಕರ ಘಟನೆಯಿಂದ ಮಲಿಯಾಬಾದ್ ಗ್ರಾಮದ ಪೋಷಕರು ಹಾಗೂ ಸಾರ್ವಜನಿಕರು ತೀವ್ರ ಭೀತಿಗೊಳಗಾಗಿದ್ದಾರೆ. ಗ್ರಾಮದಲ್ಲಿ ದಿನದಿಂದ ದಿನಕ್ಕೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ಕುರಿತು ಯರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾಹಿತಿ ಲಭ್ಯವಾಗಿದೆ.

Edited By : Vijay Kumar
PublicNext

PublicNext

21/07/2026 09:46 am

Cinque Terre

6.69 K

Cinque Terre

0