ದಾವಣಗೆರೆ : ಜಿಲ್ಲಾ ಮೊಬೈಲ್ ಮೆಕ್ಯಾನಿಕ್ಸ್ ಅಸೋಸಿಯೇಷನ್‌ನಿಂದ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ಮಾಡಲಾಯಿತು. ಉತ್ತರ ಭಾರತದಿಂದ ಬಂದಿರುವ ಮೊಬೈಲ್ ಹೋಲ್‌ಸೇಲ್ ವ್ಯಾಪಾರಿಗಳ ಅಸಂಘಟಿತ ನಡೆಯಿಂದಾಗಿ ಸ್ಥಳೀಯ ಮೊಬೈಲ್ ಮೆಕ್ಯಾನಿಕ್‌ಗಳ ಬದುಕು ದಿನೇದಿನೇ ಕಷ್ಟವಾಗುತ್ತಿದೆ. ಹೋಲ್‌ಸೇಲ್ ಅಂಗಡಿಯವರು ಮೊಬೈಲ್ ರಿಪೇರಿ ಮಾಡದೇ ಕೇವಲ ವ್ಯಾಪಾರಕ್ಕೆಷ್ಟೇ ಸೀಮಿತವಾಗಿದ್ದರೆ ಎಲ್ಲರಿಗೂ ಅನುಕೂಲ ಆಗುತ್ತದೆ.
ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ದಾವಣಗೆರೆ ಜಿಲ್ಲಾ ಮೊಬೈಲ್ ಮೆಕ್ಯಾನಿಕ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ಮೊಬೈಲ್ ಮೆಕ್ಯಾನಿಕ್‌ಗಳು ನಗರದಲ್ಲಿ ಸ್ವಯಂಪ್ರೇರಿತವಾಗಿ ಅಂಗಡಿಗಳ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.
ನಗರದ ಅಶೋಕ ರಸ್ತೆ ಮೂಲಕ ಗಾಂಧಿ ವೃತ್ತದವರೆಗೆ ಮೆರವಣಿಗೆ ನಡೆಸಿ, ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮೆರವಣಿಗೆ ಮೂಲಕ ಡಿಸಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
PublicNext
23/07/2026 08:49 am
LOADING...