ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶೀರ್ಷಿಕೆ: ಗಜದಂಡ ಶಿವಾಚಾರ್ಯರ 21 ನೇ ವರ್ಷದ ಪುಣ್ಯಸ್ಮರಣೋತ್ಸವ!

ರಾಯಚೂರು: ರಾಯಚೂರು ಜಿಲ್ಲೆಯ ಪ್ರಸಿದ್ಧ ಐತಿಹಾಸಿಕ ದೇವಾಲಯಗಳಲ್ಲಿ ಒಂದಾದ ಗುರಗುಂಟಾ ಅಮರೇಶ್ವರ ಗುರುಗಳಾದ ದೇವರಭೂಪುರದ ಗಜದಂಡ ಶಿವಾಚಾರ್ಯರ ಬೃಹನ್ಮಠದಲ್ಲಿ ಲಿಂ. ಗುರು ಗಜದಂಡ ಶಿವಾಚಾರ್ಯರ 21 ನೇ ವರ್ಷದ ಪುಣ್ಯಸ್ಮರಣೋತ್ಸವ ನಡೆಯುತ್ತಿದೆ. ಜೊತೆಗೆ ಅಭಿನವ ಶ್ರೀಗಳ ಗುರು ಪಟ್ಟಾಧಿಕಾರ ಮಹೋತ್ಸವದ ಹಿನ್ನೆಲೆಯಲ್ಲಿ ನಾಡಿನೆಲ್ಲೆಡೆ ಉತ್ತಮ ಮಳೆ ಬೆಳೆಯಾಗಲಿ, ರೈತರ ಬಾಳು ಹಸನಾಗಿ ದೇಶದ ಭದ್ರತೆ ಹಾಗೂ ದೇಶ ಸಮೃದ್ಧವಾಗಿರಲಿ ಎಂದು ಮಹಾರುದ್ರಯಾಗ, ಹೋಮ-ಹವನಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಮಹಾರುದ್ರಯಾಗದಲ್ಲಿ ನೂರಾರು ಜನ ದಂಪತಿ ಸಮೇತರಾಗಿ ಭಾಗಿಯಾಗಿ ದೇಶದ ಒಳಿತಿಗೆ, ರಾಷ್ಟ್ರದ ಶ್ರೇಯಸ್ಸಿಗೆ ಪ್ರಾರ್ಥಿಸಿದರು.

Edited By :
PublicNext

PublicNext

23/07/2026 12:38 pm

Cinque Terre

11.01 K

Cinque Terre

0