ರಾಯಚೂರು: ಕೊಪ್ಪಳ ಪ್ರಾದೇಶಿಕ ಕಚೇರಿ ವ್ಯಾಪ್ತಿಯ ರಾಯಚೂರು ಜಿಲ್ಲಾ ಕಚೇರಿ ಹಾಗೂ ದೇವದುರ್ಗ ಯೋಜನಾ ಕಚೇರಿಯ ವತಿಯಿಂದ ಅರಕೇರಾ ವಲಯದ ಅರಕೇರಾ ಕಾರ್ಯಕ್ಷೇತ್ರದಲ್ಲಿ ಜುಲೈ 23ರಂದು ಆರೋಗ್ಯ ತಪಾಸಣಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಗ್ರಾಮದ ಗಣ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿ, ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಅಗತ್ಯ ಸಲಹೆ ಹಾಗೂ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಊರಿನ ಗಣ್ಯರಾದ ಅನಂತರಾಜ್, ರಾಜಶೇಖರ, ಜಿಲ್ಲಾ ನಿರ್ದೇಶಕ ರಾಘವೇಂದ್ರ ಪಟಗಾರ್, ಕ್ಷೇತ್ರ ಯೋಜನಾಧಿಕಾರಿ ಸುಭಾಸ್ ಚೌಟರ್, ಪತ್ರಕರ್ತ ಚನ್ನಯ್ಯ ಹಿರೇಮಠ, ಮೇಲ್ವಿಚಾರಕ ರವಿಚಂದ್ರ, ಜ್ಞಾನವಿಕಾಸ ಸಮನ್ವಯಾಧಿಕಾರಿ ಅಶ್ವಿನಿ, ಸೇವಾಪ್ರತಿನಿಧಿಗಳು, ಸದಸ್ಯರು ಹಾಗೂ ಸ್ಥಳೀಯರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
Kshetra Samachara
24/07/2026 10:06 am
LOADING...