ದಾವಣಗೆರೆ: ಮಹಿಳೆಯರು ಮತ್ತು ಮಕ್ಕಳಲ್ಲಿ ಪೌಷ್ಟಿಕ ಆಹಾರದ ಮಹತ್ವದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ದಾವಣಗೆರೆ ತಾಲೂಕಿನ ಡಿವಿಜಿ–ಸಿ ವಲಯದ ಎಸ್‌ಒಜಿ (SOG) ಕಾರ್ಯಕ್ಷೇತ್ರದ ಸೋಗ್ ಕಾಲನಿಯಲ್ಲಿ ಜುಲೈ 24ರಂದು ಪೌಷ್ಟಿಕ ಆಹಾರ ಮೇಳವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ರೂಪಾ ಅವರು, "ಸಮತೋಲಿತ ಆಹಾರ ಸೇವನೆ, ಪೌಷ್ಟಿಕಾಂಶಯುಕ್ತ ಆಹಾರದ ಅಗತ್ಯತೆ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಅತ್ಯಂತ ಮುಖ್ಯ" ಎಂದು ತಿಳಿಸಿದರು. ಇದೇ ವೇಳೆ ವಿವಿಧ ಬಗೆಯ ಪೌಷ್ಟಿಕ ಆಹಾರದ ಪ್ರದರ್ಶನ ನಡೆಸಿ, ಅವುಗಳ ಉಪಯೋಗಗಳ ಕುರಿತು ವಿವರಣೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕೇಂದ್ರದ ಅಧ್ಯಕ್ಷರು, ಸೇವಾ ಪ್ರತಿನಿಧಿಗಳು ಹಾಗೂ ಕೇಂದ್ರದ ಎಲ್ಲಾ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
Kshetra Samachara
26/07/2026 05:39 pm
LOADING...