ದಾವಣಗೆರೆ: ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆಗೆ ಹಂಚಿಕೆಯಾಗಿರುವ ಅತ್ಯಾಧುನಿಕ ಸೊಕೋ (SOCO) ಮೊಬೈಲ್ ಫೊರೆನ್ಸಿಕ್ ವಾಹನವನ್ನು ಪೂರ್ವ ವಲಯದ ಐಜಿಪಿ ಡಾ. ರವಿಕಾಂತೇಗೌಡ ಬಿ.ಆರ್. ಅವರು ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಉದ್ಘಾಟಿಸಿದ್ದಾರೆ.
ಅಪರಾಧ ಪ್ರಕರಣಗಳ ಸ್ಥಳ ಪರಿಶೀಲನೆ, ವೈಜ್ಞಾನಿಕ ಸಾಕ್ಷ್ಯ ಸಂಗ್ರಹ ಹಾಗೂ ತನಿಖೆಯ ಗುಣಮಟ್ಟವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ವಾಹನವನ್ನು ಇಲಾಖೆಗೆ ನೀಡಲಾಗಿದೆ.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಶೇಖರ್ ಹೆಚ್.ಟಿ. ಸೇರಿದಂತೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
PublicNext
26/07/2026 08:03 pm
LOADING...