ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿರಾಜಪೇಟೆ: ಕಾಡಾನೆ ಮರಿ ಎಸ್ಕೇಪ್ - ಮರಿಯಾನೆ ಹಿಡಿಯಲು ಅರಣ್ಯ ಇಲಾಖೆ ಹರಸಹಾಸ

ವಿರಾಜಪೇಟೆ: ಕೊಡಗು ಜಿಲ್ಲೆ ವೀರಾಜಪೇಟೆ ತಾಲೂಕಿನ ಅಮ್ಮತ್ತಿ ಸಮೀಪದ ಆನಂದಪುರ ಗ್ರಾಮದ ಕಾಫಿ ತೋಟದಲ್ಲಿ ಮೃತಪಟ್ಟ ಕಾಡಾನೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ಮೃತ ತಾಯಿ ಆನೆಯ ಬಳಿ ಕಂಡುಬಂದ ಮರಿಯಾನೆ ಕಾರ್ಯಚರಣೆ ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕಳೆದ ಶನಿವಾರ ಆನಂದಪುರ ಗ್ರಾಮದ ಕಾಫಿ ತೋಟದಲ್ಲಿ ಕಾಡಾನೆ ಮೃತಪಟ್ಟಿತ್ತು. ತಾಯಿ ಆನೆಯ ಬಳಿ ರೋಧಿಸುತ್ತಿದ್ದ ಮರಿಯಾನೆಯನ್ನು ಅರಣ್ಯ ಇಲಾಖೆ ಸೆರೆಹಿಡಿದು ಕಟ್ಟಿಹಾಕಿದ್ರು. ಆದರೆ, ಮರಿಯಾನೆ ಸಿಬ್ಬಂದಿಗಳಿಂದ ತಪ್ಪಿಸಿಕೊಂಡು ಮೂವರು ಸಿಬ್ಬಂದಿಗಳ ಮೇಲೆ ದಾಳಿ ನಡೆಸಿ ಕಾಡಿನತ್ತ ಓಡಿಹೋಗಿತ್ತು. ಸುಮಾರು ಹತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಮರಿಯಾನೆ ಓಡಾಡುತ್ತಿರುವ ಮಾಹಿತಿ ಲಭ್ಯವಾಗಿದ್ದು ಮರಿಯಾನೆ ಮಾತ್ರ ಅರಣ್ಯ ಇಲಾಖೆಯ ಕೈಗೆ ಸಿಗದೆ ಓಡಾಡುತ್ತಿದೆ. ಇತ್ತ ಮರಿಯಾನೆ ಹಿಡಿಯಲು ಅರಣ್ಯ ಇಲಾಖೆ ಹರ ಸಾಹಸ ಪಡುತ್ತಿದ್ದಾರೆ.

Edited By : PublicNext Desk
PublicNext

PublicNext

30/07/2026 06:52 am

Cinque Terre

2.19 K

Cinque Terre

0

ಸಂಬಂಧಿತ ಸುದ್ದಿ