ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನೇಕಲ್ – ಕುಡಿದ ಮತ್ತಿನಲ್ಲಿ ಸೆಕ್ಯುರಿಟಿ ಗಾರ್ಡ್ಗಳ ಮೇಲೆ ಗನ್ ಫೈರಿಂಗ್..! ಟೆಕ್ಕಿ ಅಂದರ್

ಆನೇಕಲ್ : ಕುಡಿದ ನಶೆಯಲ್ಲಿ ಏರ್ ಗನ್ ನಿಂದ ಸೆಕ್ಯುರಿಟಿ ಗಾರ್ಡ್ ಗಳ ಮೇಲೆ ಫೈರಿಂಗ್ ಮಾಡಿರೋ ಘಟನೆ ಬೆಳಕಿಗೆ ಬಂದಿದೆ. ಬಂಡಾಪುರ ಸಮೀಪದ ಸಿಪಾನಿ ಅಪಾರ್ಟ್ಮೆಂಟ್ ನಲ್ಲಿ ಘಟನೆ ನಡೆದಿದೆ. ಲಕ್ನೋ ಮೂಲದ ಅನುರಾಗ್ ತಿವಾರಿ(40) ಎಂಬಾತನಿಂದ ಫೈರಿಂಗ್ ನಡೆದಿದೆ. ವೈಟ್ ಫೀಲ್ಡ್ ನ ಖಾಸಗಿ ಕಂಪನಿಯಲ್ಲಿ ಐಟಿ ಉದ್ಯೋಗಿಯಾಗಿರೋ ಆರೋಪಿ ಅಪಾರ್ಟ್ಮೆಂಟ್ B304 ಫ್ಲಾಟ್ ನ ವಾಸಿ ಅನ್ನೋದು ಗೊತ್ತಾಗಿದೆ.

ಕಳೆದ ಎಂಟು ತಿಂಗಳಿನಿಂದ ಫ್ಲ್ಯಾಟ್ ಬಾಡಿಗೆಗೆ ಪಡೆದು ವಾಸ ಮಾಡ್ತಿದ್ದ. ಕಳೆದ ರಾತ್ರಿ ಕಂಠ ಪೂರ್ತಿ ಕುಡಿದಿದ್ದ ಅನುರಾಗ್ ತಿವಾರಿ, ಫ್ಲ್ಯಾಟ್ ಒಳಗೆ ಫೋನ್ ನಲ್ಲಿ ಮಾತನಾಡುತ್ತ ಕೂಗಾಡುತ್ತಿದ್ದ ಅಸಾಮಿ ಬಳಿಕ ಬಾಲ್ಕನಿಯಿಂದ ಏರ್ ಗನ್ ಮೂಲಕ ಫೈರಿಂಗ್ ಮಾಡಿದ್ದಾನೆ. ಕಾರು ಮತ್ತು ಪಾರ್ಕಿಂಗ್ ಶೆಡ್ ಶೀಟ್ ಗಳ ಮೇಲೆ ಫೈರಿಂಗ್ ಮಾಡಿದ್ದಾನೆ. ಸೌಂಡ್ ಕೇಳಿಸಿಕೊಂಡು ಅಲ್ಲಿಗೆ ಬಂದಿದ್ದ ಸೆಕ್ಯುರಿಟಿ ಗಾರ್ಡ್ಸ್ ಮೇಲೆ ಕೂಡ ಫೈರಿಂಗ್ ಮಾಡಿದ್ದಾನೆ.

Edited By :
PublicNext

PublicNext

06/08/2026 05:37 pm

Cinque Terre

7.79 K

Cinque Terre

0