ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಕಾಫಿನಾಡಲ್ಲಿ ಮಳೆ ಕೊರತೆ, ಬಿತ್ತನೆಗೆ ಹಿನ್ನಡೆ, ಅರ್ಹ ರೈತರಿಗೆ ಶೀಘ್ರ ವಿಮಾ ಪರಿಹಾರಕ್ಕೆ ಕ್ರಮ

ಚಿಕ್ಕಮಗಳೂರು: ಕಾಫಿನಾಡಿನ ಮಳೆಯ ಕೊರತೆಯಿಂದಾಗಿ ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯಕ್ಕೆ ಭಾರಿ ಹಿನ್ನಡೆಯಾಗಿದೆ. 97,045 ಹೆಕ್ಟೇರ್ ಪ್ರದೇಶದಲ್ಲಿ ಈ ಬಾರಿ ಬಿತ್ತನೆ ಗುರಿ ಹೊಂದಾಲಾಗಿತ್ತು. ಆದರೆ ಆಗಸ್ಟ್ 22 ರವರೆಗೆ ಕೇವಲ 23,332 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದ್ದು, ನಿಗದಿತ ಗುರಿಯ ಶೇಕಡ 24 ರಷ್ಟು ಮಾತ್ರ ಪ್ರಗತಿ ದಾಖಲಾಗಿದೆ.

ವಿಶೇಷವಾಗಿ ಕಡೂರು ತಾಲೂಕಿನಲ್ಲಿ ಬಿತ್ತನೆ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಅಲ್ಲಿ ಗುರಿಯ ಕೇವಲ 6% ರಷ್ಟು ಮಾತ್ರ ಬಿತ್ತನೆಯಾಗಿದೆ. ನಿಯಮಾವಳಿಗಳ ಪ್ರಕಾರ ಶೇಕಡ 25ಕ್ಕಿಂತ ಕಡಿಮೆ ಬಿತ್ತನೆಯಾದ ಸಂದರ್ಭದಲ್ಲಿ ಬಿತ್ತನೆ ವಿಫಲತೆ ನಿಯಮವನ್ನು ಜಾರಿಗೊಳಿಸಲು ಅವಕಾಶವಿದೆ. ಈ ನಿಟ್ಟಿನಲ್ಲಿ ವಿಮಾ ಕಂಪನಿಗಳ ಪ್ರತಿನಿಧಿಗಳೊಂದಿಗೆ ಈಗಾಗಲೇ ಜಂಟಿ ಸಮೀಕ್ಷೆ ನಡೆಸಲಾಗುತ್ತಿದೆ. ಪ್ರೀಮಿಯಂ ಪಾವತಿಸಿರುವ ಅರ್ಹ ರೈತರಿಗೆ ಶೀಘ್ರವಾಗಿ ಪರಿಹಾರ ಮೊತ್ತ ತಲುಪಿಸಲು ಸರ್ಕಾರಕ್ಕೆ ಅಧಿಕೃತ ವರದಿ ಸಲ್ಲಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಭಂನ್ವರ್ ಸಿಂಗ್ ಮೀನಾ ಮಾಹಿತಿ ನೀಡಿದ್ದಾರೆ.

Edited By :
PublicNext

PublicNext

27/08/2026 08:41 pm

Cinque Terre

12.54 K

Cinque Terre

0

ಸಂಬಂಧಿತ ಸುದ್ದಿ