ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಷ್ಯಾದ ಶೋರೂಂನಲ್ಲಿ 'ತಾಳ್ಮೆ' ತಪ್ಪಿದ ರೋಬೊಟ್?: ಗ್ರಾಹಕನಿಗೆ ಒದ್ದ 'ಟರ್ಮಿನೇಟರ್'!

​ರಷ್ಯಾದ ಎಲೆಕ್ಟ್ರಾನಿಕ್ಸ್ ಶೋರೂಂ ಒಂದರಲ್ಲಿ ನಡೆದ ವಿಚಿತ್ರ ಘಟನೆಯೊಂದರ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶೋರೂಂನಲ್ಲಿದ್ದ ಹ್ಯೂಮನಾಯ್ಡ್ (ಮಾನವ ರೂಪಿ) ರೋಬೊಟ್ ಒಂದಕ್ಕೆ ಗ್ರಾಹಕನೊಬ್ಬ ತಳ್ಳಿದಾಗ, ಪ್ರತಿಯಾಗಿ ಆ ರೋಬೊಟ್ ಆತನಿಗೆ ಒದೆಯಲು ಯತ್ನಿಸಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

​ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು "ಟರ್ಮಿನೇಟರ್" ಸಿನಿಮಾ ಶೈಲಿಯ ಮೀಮ್ಸ್ ಮತ್ತು ತಮಾಷೆಯ ಕಮೆಂಟ್ಸ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕೆಲವರು ಇದು ವೀಡಿಯೋ ಪಬ್ಲಿಸಿಟಿಗಾಗಿ ಮಾಡಿದ 'ಸ್ಟಂಟ್' ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ರೋಬೊಟ್ ಗ್ರಾಹಕನಿಗೆ ಒದೆಯಲು ಮುಂದಾಗುತ್ತಿದ್ದಂತೆ ಅದನ್ನು ಆಪರೇಟ್ ಮಾಡುತ್ತಿದ್ದ ಸಿಬ್ಬಂದಿ ತಕ್ಷಣವೇ ಅದನ್ನು ಆಫ್ (Power Down) ಮಾಡಿದ್ದನ್ನು ಬೆಟ್ಟು ಮಾಡಿ ತೋರಿಸಿದ್ದಾರೆ.

Edited By :
PublicNext

PublicNext

02/09/2026 11:02 pm

Cinque Terre

22.86 K

Cinque Terre

1