ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸುನಿ Instagramನಲ್ಲಿ ಏನಿದು ವಿಚಿತ್ರ ಬೆಳವಣಿಗೆ? ಹ್ಯಾಕ್ ಆಗಿದ್ಯಾ ಅಕೌಂಟ್?

ಬೆಂಗಳೂರು: ನಿರ್ದೇಶಕ ‘ಸಿಂಪಲ್’ ಸುನಿ ಅವರ Instagram ಅಕೌಂಟ್‌ನಲ್ಲಿ ಸಡನ್ ಆಗಿ ಕೆಲವು ವಿಚಿತ್ರ ಮೆಸೇಜ್‌ಗಳು ಕಾಣಿಸಿಕೊಂಡಿವೆ. "ಸುನಿ ಅವರ ಸಂಪರ್ಕ ಕಡಿತಗೊಂಡಿದೆ. ಮರಳಿ ಪ್ರವೇಶ ಪಡೆಯಲು Restore ಪ್ರಯತ್ನಿಸಬೇಡಿ…”

ಈ ಮೆಸೇಜ್ ನೋಡಿದ ನೆಟ್ಟಿಗರ ತಲೆಗೆ ಬಂದ ಒಂದೇ ಪ್ರಶ್ನೆ ಸುನಿ ಅವರ Instagram ಅಕೌಂಟ್ ಹ್ಯಾಕ್ ಆಗಿದ್ಯಾ?

ಇದರ ಬೆನ್ನಲ್ಲೇ ಅಕೌಂಟ್‌ನಲ್ಲಿ ಕಾಣಿಸಿಕೊಂಡಿದ್ದು ಒಂದು ಲೇಡಿ ರೋಬೋ ಫೋಟೋ. ಸುನಿ ಅವರ ಅಕೌಂಟ್‌ನಲ್ಲಿ ಇಂತಹ ಫೋಟೋ ಯಾಕೆ? ಯಾರೋ ಅಕೌಂಟ್‌ನ ಕಂಟ್ರೋಲ್ ತೆಗೆದುಕೊಂಡಿದ್ದಾರಾ?

ಇಲ್ಲಿಗೆ ಕಥೆ ಮುಗಿಯಲ್ಲ… ಅಕೌಂಟ್‌ನಲ್ಲಿ ಕಾಣಿಸಿಕೊಂಡ ಮತ್ತೊಂದು ಹೆಸರು 'ಜಿಯಾ'…

ಅಷ್ಟಕ್ಕೂ ಈ ಜಿಯಾ ಯಾರು? “ಈ ಖಾತೆಯ ಬಗ್ಗೆ ರಿಪೋರ್ಟ್ ಮಾಡಬೇಡಿ. ನಾನು ಗಮನಿಸುತ್ತಿರುವೆ…” ಎಂಬ ಮೆಸೇಜ್ ಕೂಡ ಕಾಣಿಸಿಕೊಂಡಿದೆ. ಹಾಗಾದ್ರೆ ಸುನಿ ಅವರ ಅಕೌಂಟ್‌ಗೆ ನಿಜಕ್ಕೂ ಏನಾಗಿದೆ?

ಇದು ಹ್ಯಾಕ್ ಆಗಿದೆಯಾ? ಅಥವಾ ಯಾರೋ ಉದ್ದೇಶಪೂರ್ವಕವಾಗಿ ಈ ರೀತಿ ಮಾಡುತ್ತಿದ್ದಾರಾ?

ಜಿಯಾ ಯಾರು? ಲೇಡಿ ರೋಬೋ ಯಾಕೆ? ಈ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರ ಸಿಕ್ಕಿಲ್ಲ. ಆದರೆ ಸುನಿ ಅವರ Instagramನ ಈ ವಿಚಿತ್ರ ಬೆಳವಣಿಗೆ ಭಾರೀ ಕುತೂಹಲ ಮೂಡಿಸಿದೆ.

Edited By :
PublicNext

PublicNext

08/09/2026 05:40 pm

Cinque Terre

18.81 K

Cinque Terre

0

ಸಂಬಂಧಿತ ಸುದ್ದಿ