ಬಾಗಲಕೋಟೆ: ಬೀಳಗಿ ತಾಲೂಕಿನ ಬಾದರದಿನ್ನಿ ಗ್ರಾಮಕ್ಕೆ ಭೇಟಿ ನೀಡಿದ್ದ ಶಾಸಕ ಜೆ .ಟಿ. ಪಾಟೀಲ ಅವರು, ತಮ್ಮ ಕಾರಿನಲ್ಲಿ ಕುಳಿತೇ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿರುವ ಅಪರೂಪದ ಘಟನೆ ನಡೆದಿದೆ.
ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಶಾಸಕರು, "ಎಸ್‌ಎಸ್‌ಎಲ್‌ಸಿಯಲ್ಲಿ ಎಷ್ಟು ಅಂಕ ಗಳಿಸುತ್ತೀರಿ?" ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಕೆಲ ವಿದ್ಯಾರ್ಥಿಗಳು ಮೌನ ವಹಿಸಿದರೆ, ಅದೇ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿನಿ ಭಾಗ್ಯಶ್ರೀ ಪಾಟೀಲ ಧೈರ್ಯವಾಗಿ ಮುಂದೆ ಬಂದು, "ನಾನು ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 100ರಷ್ಟು ಅಂಕ ಗಳಿಸುತ್ತೇನೆ ಸರ್. ನಾನು ಐಎಎಸ್ (IAS) ಮಾಡಬೇಕು, ನನ್ನ ಮುಂದಿನ ವಿದ್ಯಾಭ್ಯಾಸ ನೀವೇ ಮಾಡಿಸಬೇಕು ಸರ್" ಎಂದು ಶಾಸಕರ ಬಳಿ ನೇರವಾಗಿ ತನ್ನ ಆಸೆಯನ್ನು ತೋಡಿಕೊಂಡಿದ್ದಾಳೆ ಕಣ್ಣೀರಿಟ್ಟಿದ್ದಾಳೆ.
ಬಾಲಕಿಯ ಈ ಆತ್ಮವಿಶ್ವಾಸ ಹಾಗೂ ಗುರಿಯನ್ನು ಮೆಚ್ಚಿಕೊಂಡ ಶಾಸಕ ಜೆ.ಟಿ. ಪಾಟೀಲ ಅವರು, "ಖಂಡಿತ ಅಮ್ಮಾ, ನಾನು ನಿನಗೆ ಸಹಾಯ ಮಾಡುತ್ತೇನೆ. ನಮ್ಮ ಮನೆಯಲ್ಲಿಯೇ ಇಬ್ಬರು ಐಎಎಸ್ ಅಧಿಕಾರಿಗಳಿದ್ದಾರೆ, ನಿನಗೆ ಖಂಡಿತ ಬೆಂಬಲ ನೀಡುತ್ತೇನೆ" ಎಂದು ಭರವಸೆ ನೀಡಿದ್ದಾರೆ. ಶಾಸಕರ ಈ ಪ್ರೋತ್ಸಾಹದ ಮಾತುಗಳು ಸ್ಥಳೀಯರು ಹಾಗೂ ವಿದ್ಯಾರ್ಥಿನಿಯ ಕುಟುಂಬದಲ್ಲಿ ಹರ್ಷ ಮೂಡಿಸಿವೆ.
PublicNext
19/09/2026 10:47 pm
LOADING...