ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾಷಣ ಮುಗಿಯುತ್ತಿದ್ದಂತೆ ಮಹಿಳೆಗೆ ಮುತ್ತಿಕ್ಕಲು ಮುಂದಾದ ಟ್ರಂಪ್: ಕ್ಯಾಮೆರಾದಲ್ಲಿ ಸೆರೆಯಾಯ್ತು ಮುಜುಗರದ ಕ್ಷಣ, ವಿಡಿಯೋ ವೈರಲ್

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮತ್ತೊಂದು ವಿಚಿತ್ರ ನಡೆ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ವೇದಿಕೆಯಲ್ಲಿ ಮಹಿಳೆಯೊಬ್ಬರು ಭಾಷಣ ಮುಗಿಸಿದ ಬೆನ್ನಲ್ಲೇ, ಟ್ರಂಪ್ ಆಕೆಗೆ ಅನಿರೀಕ್ಷಿತವಾಗಿ ಮುತ್ತಿಕ್ಕಲು (Kiss) ಮುಂದಾದ ಘಟನೆ ಮತ್ತು ಅದಕ್ಕೆ ಆಕೆ ನೀಡಿದ ಮುಖಭಾವ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದೆ.

ಹೌದು ಕಾರ್ಯಕ್ರಮವೊಂದರಲ್ಲಿ ಮಹಿಳಾ ಮುಖಂಡರೊಬ್ಬರು ಭಾಷಣ ಮುಗಿಸಿ ನಿರ್ಗಮಿಸಲು ಸಿದ್ಧರಾಗುತ್ತಿದ್ದಂತೆ, ವೇದಿಕೆಯಲ್ಲಿದ್ದ ಟ್ರಂಪ್ ಏಕಾಏಕಿ ಅವರ ಕಡೆಗೆ ವಾಲಿ ಮುತ್ತಿಕ್ಕಲು ಯತ್ನಿಸಿದ್ದಾರೆ. ಯಾವುದೇ ಮುನ್ಸೂಚನೆ ಇಲ್ಲದೆ ನಡೆದ ಈ ಹಠಾತ್ ಬೆಳವಣಿಗೆಯಿಂದ ಆ ಮಹಿಳೆ ಒಂದು ಕ್ಷಣ ತಬ್ಬಿಬ್ಬಾಗಿದ್ದು, ಆಕೆಯ ಮುಖದಲ್ಲಿ ಮೂಡಿದ ಮುಜುಗರದ ಹಾಗೂ ಆಘಾತದ ಪ್ರತಿಕ್ರಿಯೆ ಸ್ಪಷ್ಟವಾಗಿ ಸೆರೆಯಾಗಿದೆ.

ಈ ವಿಡಿಯೋ ಹೊರಬೀಳುತ್ತಿದ್ದಂತೆಯೇ ಇಂಟರ್ನೆಟ್ ಜಗತ್ತಿನಲ್ಲಿ ಪರ-ವಿರೋಧದ ದೊಡ್ಡ ಚರ್ಚೆಯೇ ಶುರುವಾಗಿದೆ.

ಇದು ಟ್ರಂಪ್‌ಗೆ ಎದುರಾದ ಮತ್ತೊಂದು ದೊಡ್ಡ ‘ಪಿಆರ್ ಪ್ರಮಾದ’ (PR Blunder) ಹಾಗೂ ಸಾರ್ವಜನಿಕವಾಗಿ ನಡೆದುಕೊಳ್ಳಬೇಕಾದ ಕನಿಷ್ಠ ಸೌಜನ್ಯದ ಕೊರತೆ ಎಂದು ವಿರೋಧಿಗಳು ಮತ್ತು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ಮತ್ತೊಂದೆಡೆ, ಇದು ಕೇವಲ ಪ್ರೀತಿ-ವಿಶ್ವಾಸದ ಅಭಿವ್ಯಕ್ತಿಯಷ್ಟೇ, ರಾಜಕೀಯ ವಿರೋಧಿಗಳು ಸಣ್ಣ ವಿಚಾರವನ್ನು ಅನಗತ್ಯವಾಗಿ ದೊಡ್ಡದು ಮಾಡುತ್ತಿದ್ದಾರೆ ಎಂದು ಟ್ರಂಪ್ ಬೆಂಬಲಿಗರು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಇದು ಸಾರ್ವಜನಿಕ ನಡತೆಯ ವೈಫಲ್ಯವೋ ಅಥವಾ ರಾಜಕೀಯ ತಂತ್ರಗಾರಿಕೆಯ ಭಾಗವೋ ಎಂಬ ವಾದ-ವಿವಾದಗಳು ಜೋರಾಗಿದ್ದು, ಈ ಅಸಹಜ ಘಟನೆಯ ತುಣುಕು ಸದ್ಯ ಜಾಗತಿಕ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿದೆ.

Edited By : Nirmala Aralikatti
PublicNext

PublicNext

20/09/2026 11:57 am

Cinque Terre

17.6 K

Cinque Terre

3

ಸಂಬಂಧಿತ ಸುದ್ದಿ