ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇರಾನ್‌ ಯುದ್ಧ ಅಂತ್ಯಕ್ಕೆ ಕಾಯುವಿಕೆ ; ಬ್ರಿಟನ್‌ನಿಂದ B-1B ಬಾಂಬರ್‌ ಹಾರಾಟ!

ಲಂಡನ್‌ : ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಸಂಘರ್ಷಕ್ಕೆ ಅಂತ್ಯ ಹಾಡುವ ನಿರೀಕ್ಷೆ ಮೂಡಿರುವ ನಡುವೆಯೇ, ಬ್ರಿಟನ್‌ನ RAF ಫೇರ್‌ಫೋರ್ಡ್‌ ವಾಯುನೆಲೆಯಿಂದ ಅಮೆರಿಕದ B-1B ಬಾಂಬರ್‌ ಹಾರಾಟ ನಡೆಸಿರುವುದು ಹೊಸ ಚರ್ಚೆಗೆ ಕಾರಣವಾಗಿದೆ.

ಇರಾನ್‌ ಸಂಘರ್ಷದ ಕುರಿತು ಅಮೆರಿಕದ ಮುಂದಿನ ನಡೆ ಏನು ಎಂಬ ಕುತೂಹಲ ಹೆಚ್ಚಿರುವ ಸಮಯದಲ್ಲೇ ಬಾಂಬರ್‌ ಹಾರಾಟ ನಡೆಸಿರುವುದು ಗಮನ ಸೆಳೆದಿದೆ. ಫೇರ್‌ಫೋರ್ಡ್‌ ವಾಯುನೆಲೆಯಿಂದ B-1B ಬಾಂಬರ್‌ ಹೊರಟಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿವೆ.

ದೀರ್ಘಶ್ರೇಣಿಯ ದಾಳಿಗೆ ಬಳಸಬಹುದಾದ B-1B ಬಾಂಬರ್‌ ಫೇರ್‌ಫೋರ್ಡ್‌ನಿಂದ ಇರಾನ್‌ ತಲುಪಲು ಹಲವು ಗಂಟೆಗಳ ಹಾರಾಟದ ಅಗತ್ಯವಿದೆ. ಆದರೆ, ಪ್ರಸ್ತುತ ಹಾರಾಟದ ಅಂತಿಮ ಗಮ್ಯಸ್ಥಾನ ಅಥವಾ ಕಾರ್ಯಾಚರಣೆಯ ಉದ್ದೇಶದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

RAF ಫೇರ್‌ಫೋರ್ಡ್‌ ಅಮೆರಿಕದ ಬಾಂಬರ್‌ ವಿಮಾನಗಳ ನಿಯೋಜನೆ ಹಾಗೂ ತರಬೇತಿ ಕಾರ್ಯಾಚರಣೆಗಳಿಗೆ ಹಿಂದಿನಿಂದಲೂ ಬಳಕೆಯಾಗುತ್ತಿರುವ ಪ್ರಮುಖ ವಾಯುನೆಲೆಯಾಗಿದೆ. ಹೀಗಾಗಿ ಅಲ್ಲಿಂದ ಬಾಂಬರ್‌ ಹೊರಟಿರುವುದನ್ನು ಮಾತ್ರ ಆಧರಿಸಿ ಅದು ಇರಾನ್‌ ದಿಕ್ಕಿನಲ್ಲೇ ತೆರಳಿದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.

ಈ ಹಿಂದೆ ಇರಾನ್‌ ವಿರುದ್ಧ ನಡೆದ ಅಮೆರಿಕದ ಸೇನಾ ಕಾರ್ಯಾಚರಣೆಗಳ ಸಂದರ್ಭದಲ್ಲೂ ಫೇರ್‌ಫೋರ್ಡ್‌ ಪ್ರಮುಖ ನೆಲೆಯಾಗಿ ಕಾಣಿಸಿಕೊಂಡಿತ್ತು. ಇದೀಗ ಮತ್ತೆ B-1B ಬಾಂಬರ್‌ಗಳ ಚಲನವಲನ ಕಂಡುಬಂದಿರುವುದು ಸಂಘರ್ಷದ ಮುಂದಿನ ಬೆಳವಣಿಗೆಗಳ ಬಗ್ಗೆ ಕುತೂಹಲ ಮೂಡಿಸಿದೆ.

ಮತ್ತೊಂದೆಡೆ, ಇರಾನ್‌ ಕೂಡ ತನ್ನ ಸೇನಾ ಸಿದ್ಧತೆಗಳನ್ನು ಹೆಚ್ಚಿಸಿಕೊಂಡಿದೆ ಎಂಬ ವರದಿಗಳಿವೆ. ಹೀಗಾಗಿ ಯುದ್ಧ ಅಂತ್ಯದ ನಿರೀಕ್ಷೆಯ ನಡುವೆಯೇ ಕಂಡುಬಂದಿರುವ ಈ ಬಾಂಬರ್‌ ಚಲನೆ ಮುಂದಿನ ದಿನಗಳಲ್ಲಿ ಯಾವ ರೀತಿಯ ಬೆಳವಣಿಗೆಗೆ ಕಾರಣವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

Edited By :
PublicNext

PublicNext

20/09/2026 03:02 pm

Cinque Terre

7.07 K

Cinque Terre

0

ಸಂಬಂಧಿತ ಸುದ್ದಿ