ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿನ ವಿಚಾರಕ್ಕೆ ಸಾರಾ ಸ್ಯಾಂಡರ್ಸ್‌ಗೆ ಕಿರುಕುಳ ನೀಡಿದ್ರಾ ಟ್ರಂಪ್? ವಿಡಿಯೋ ಸುತ್ತ ಭುಗಿಲೆದ್ದ ಭಾರೀ ವಿವಾದ!

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮದೇ ಮಾಜಿ ಮಾಧ್ಯಮ ಕಾರ್ಯದರ್ಶಿ ಹಾಗೂ ಪ್ರಸ್ತುತ ಅರ್ಕಾನ್ಸಾಸ್ ಗವರ್ನರ್ ಸಾರಾ ಹಕಬೀ ಸ್ಯಾಂಡರ್ಸ್ ಧರಿಸಿದ್ದ ಉಡುಪಿನ ಕುರಿತು ಸಾರ್ವಜನಿಕವಾಗಿ ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿದ್ದಾರೆ ಎಂಬ ಆರೋಪವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಹೌದು ಕಾರ್ಯಕ್ರಮವೊಂದರಲ್ಲಿ ಸಾರಾ ಹಕಬೀ ಸ್ಯಾಂಡರ್ಸ್ ಧರಿಸಿದ್ದ ಬಿಗಿಯಾದ ಉಡುಪನ್ನು (clingy top) ಗಮನಿಸಿದ ಟ್ರಂಪ್, ಯಾವುದೇ ಕಾರಣವಿಲ್ಲದೆ ಅವರತ್ತ ಆಕ್ಷೇಪಾರ್ಹ ರೀತಿಯಲ್ಲಿ ನೋಡಿದ್ದಾರೆ ಮತ್ತು ಕಿರುಕುಳ ನೀಡುವಂತೆ ಅಸಹಜವಾಗಿ ವರ್ತಿಸಿದ್ದಾರೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ. ಈ ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ರಾಜಕೀಯ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

ಹಲವು ವರ್ಷಗಳ ಕಾಲ ಶ್ವೇತಭವನದಲ್ಲಿ ತಮ್ಮ ಆಪ್ತ ವಕ್ತಾರೆಯಾಗಿ ಸೇವೆ ಸಲ್ಲಿಸಿದ್ದ ಹಿರಿಯ ಮಹಿಳಾ ನಾಯಕಿಯೊಬ್ಬರ ಉಡುಪಿನ ಬಗ್ಗೆ ಈ ರೀತಿಯ ಅಸಭ್ಯ ವರ್ತನೆ ತೋರಿರುವುದು ಟ್ರಂಪ್ ಅವರ ಮಹಿಳಾ ವಿರೋಧಿ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ವಿರೋಧಿಗಳು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಮತ್ತೊಂದೆಡೆ, ಇದು ವಿಡಿಯೋದ ಸಣ್ಣ ತುಣುಕನ್ನು ಮುಂದಿಟ್ಟುಕೊಂಡು ನಡೆಸುತ್ತಿರುವ ಅಪಪ್ರಚಾರ ಎಂದೂ ಕೆಲವರು ವಾದಿಸುತ್ತಿದ್ದು, ಈ ವಿವಾದ ಸದ್ಯ ಅಮೆರಿಕನ್ ರಾಜಕೀಯ ವಲಯದಲ್ಲಿ ವ್ಯಾಪಕ ಸದ್ದು ಮಾಡುತ್ತಿದೆ.

Edited By : Nirmala Aralikatti
PublicNext

PublicNext

20/09/2026 11:12 am

Cinque Terre

15.14 K

Cinque Terre

0

ಸಂಬಂಧಿತ ಸುದ್ದಿ