ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅರಬ್ಬೀ ಸಮುದ್ರದಲ್ಲಿ ಭೀಕರ ಸಂಘರ್ಷ: ಅಮೆರಿಕದ 2 ಯುದ್ಧ ನೌಕೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ಆರೋಪ ಸೈನಿಕರಿಗೆ ಗಂಭೀರ ಗಾಯ

ವಾಷಿಂಗ್ಟನ್/ಟೆಹ್ರಾನ್ : ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ದಟ್ಟವಾಗಿದ್ದು, ಅರಬ್ಬೀ ಸಮುದ್ರದಲ್ಲಿ ಬೀಡುಬಿಟ್ಟಿರುವ ಅಮೆರಿಕದ ಎರಡು ಪ್ರಮುಖ ವಿಮಾನವಾಹಿ ಯುದ್ಧ ನೌಕೆಗಳ (Aircraft Carriers) ಮೇಲೆ ಇರಾನ್ ಭೀಕರ ಕ್ಷಿಪಣಿ ದಾಳಿ ನಡೆಸಿದೆ ಎಂಬ ಸ್ಫೋಟಕ ಸುದ್ದಿ ಹೊರಬಿದ್ದಿದೆ.

ಹೌದು ಅರಬ್ಬೀ ಸಮುದ್ರದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಯುಎಸ್ ನೌಕಾಪಡೆಯ ಬೃಹತ್ ಯುದ್ಧ ನೌಕೆಗಳನ್ನು ಗುರಿಯಾಗಿಸಿಕೊಂಡು ಇರಾನ್ ಈ ದಾಳಿ ನಡೆಸಿದೆ ಎನ್ನಲಾಗಿದೆ. ದಾಳಿಯ ತೀವ್ರತೆಗೆ ನೌಕೆಯಲ್ಲಿದ್ದ ಅನೇಕ ಅಮೆರಿಕನ್ ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಏಕಾಏಕಿ ನಡೆದ ಈ ಕ್ಷಿಪಣಿ ದಾಳಿಯು ಅಂತಾರಾಷ್ಟ್ರೀಯ ಜಲಮಾರ್ಗದಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ.

ಕಳೆದ ಕೆಲ ದಿನಗಳಿಂದ ಅಮೆರಿಕ ಮತ್ತು ಇರಾನ್ ನಡುವೆ ಬಿಕ್ಕಟ್ಟು ತಾರಕಕ್ಕೇರಿದ್ದು, ಇದೀಗ ನೇರವಾಗಿ ಅಮೆರಿಕದ ಪ್ರಮುಖ ರಕ್ಷಣಾ ನೌಕೆಗಳ ಮೇಲೆಯೇ ದಾಳಿ ನಡೆಸಿರುವುದು ಜಾಗತಿಕ ಮಟ್ಟದಲ್ಲಿ ಮೂರನೇ ಮಹಾಯುದ್ಧದ ಭೀತಿಯನ್ನು ಹುಟ್ಟುಹಾಕಿದೆ. ದಾಳಿಗೆ ಒಳಗಾದ ಸೈನಿಕರಿಗೆ ತಕ್ಷಣದ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದ್ದು, ಪರಿಸ್ಥಿತಿ ತೀರಾ ಗಂಭೀರವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೆಂಟಗನ್‌ನಿಂದ ಅಧಿಕೃತ ಪ್ರತಿಕ್ರಿಯೆ ಮತ್ತು ಹಾನಿಯ ಪೂರ್ಣ ವಿವರ ಇನ್ನಷ್ಟೇ ಹೊರಬರಬೇಕಿದೆ.

Edited By : Nirmala Aralikatti
PublicNext

PublicNext

20/09/2026 11:05 am

Cinque Terre

19.29 K

Cinque Terre

6

ಸಂಬಂಧಿತ ಸುದ್ದಿ