ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಸ್ಟಲ್ ರೋಡ್‌ನಲ್ಲಿ ಸಾವಿನ ಸುಳಿ: 75 ಅಡಿ ಕೆಳಗೆ ಬಿದ್ದ BMW, ಮೂವರು ವಿದ್ಯಾರ್ಥಿಗಳು ಬಲಿ

ಮುಂಬೈ : ಮುಂಬೈನ ಪ್ರತಿಷ್ಠಿತ ಕರಾವಳಿ ರಸ್ತೆಯಲ್ಲಿ ಭಾನುವಾರ ಭೀಕರ ದುರಂತವೊಂದು ಸಂಭವಿಸಿದೆ. ಮಿತಿಮೀರಿದ ವೇಗದಲ್ಲಿ ಸಾಗುತ್ತಿದ್ದ ಐಷಾರಾಮಿ ಬಿಎಂಡಬ್ಲ್ಯು (BMW) ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಮೇಲ್ಸೇತುವೆಯಿಂದ ಬರೋಬ್ಬರಿ 75 ಅಡಿ ಆಳಕ್ಕೆ ಬಿದ್ದ ಪರಿಣಾಮ ಮೂವರು ಕಾಲೇಜು ವಿದ್ಯಾರ್ಥಿಗಳು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ.

ಹೌದು ಭಾನುವಾರ ಬೆಳಗಿನ ಜಾವ 5.20ರ ಸುಮಾರಿಗೆ ಮರೀನ್ ಡ್ರೈವ್‌ನಿಂದ ಹಾಜಿ ಅಲಿ ಕಡೆಗೆ ತೆರಳುತ್ತಿದ್ದ ಕಾರು, ಲೋಟಸ್ ಜೆಟ್ಟಿ ಸಮೀಪದ ಲಾಲಾ ಲಜಪತ್‌ರಾಯ್ ಕಾಲೇಜು ಎದುರಿನ ಎಲಿವೇಟೆಡ್ ರಸ್ತೆಯಲ್ಲಿ ಈ ಅಪಘಾತಕ್ಕೆ ಈಡಾಗಿದೆ. ಕಾರು ಅತಿವೇಗದಲ್ಲಿದ್ದ ಕಾರಣ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡು ಡಿವೈಡರ್‌ಗೆ ಅಪ್ಪಳಿಸಿ, ಸೇತುವೆಯ ಮೇಲಿಂದ ಕೆಳಗೆ ಹಾರಿ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಹಾಗೂ ಪೊಲೀಸರು ಕಾರಿನಲ್ಲಿದ್ದ ನಾಲ್ವರನ್ನು ಹೊರತೆಗೆದು ಬೃಹನ್‌ಮುಂಬೈ ಮಹಾನಗರ ಪಾಲಿಕೆಯ ನಾಯರ್ ಆಸ್ಪತ್ರೆಗೆ ಸಾಗಿಸಿದರು. ಆದರೆ ಪರೀಕ್ಷಿಸಿದ ವೈದ್ಯರು ಮೂವರು ಮೃತಪಟ್ಟಿರುವುದಾಗಿ ಘೋಷಿಸಿದರು.

ಶನಾಯ್ ಗಜ್ಜಲ್ (21), ಧಿರ್ಯಾ ಸೇಠ್ (17) ಮತ್ತು ಆದಿತ್ಯ ಜಕಸಾನಿಯಾ (19) ಮೃತರಾಗಿದ್ದು ತೀವ್ರವಾಗಿ ಗಾಯಗೊಂಡಿರುವ ಆದಿತ್ಯ ಓಸ್ವಾಲ್ (23) ಎಂಬ ವಿದ್ಯಾರ್ಥಿಯ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯ ಟ್ರಾಮಾ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ ಕಾರಿನಲ್ಲಿದ್ದವರು ನಾಲ್ವರೂ ವಿದ್ಯಾರ್ಥಿಗಳಾಗಿದ್ದು, ವಾರಾಂತ್ಯದ ಮೋಜು-ಮಸ್ತಿಯ ವೇಳೆ ದುರಂತ ಸಂಭವಿಸಿದೆಯೇ ಅಥವಾ ಕಾರು ಚಾಲಕನ ನಿರ್ಲಕ್ಷ್ಯವೇ ಕಾರಣವೇ ಎಂಬುದರ ಕುರಿತು ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ. ದಕ್ಷಿಣ ಮುಂಬೈನ ಮರೀನ್ ಡ್ರೈವ್ ಹಾಗೂ ವರ್ಲಿ ಸಂಪರ್ಕಿಸುವ ಈ 10.58 ಕಿಲೋಮೀಟರ್ ಉದ್ದದ ಹೈಸ್ಪೀಡ್ ಕಾರಿಡಾರ್‌ನಲ್ಲಿ ಅತಿವೇಗದ ಚಾಲನೆಗೆ ಕಡಿವಾಣ ಹಾಕುವ ಕುರಿತು ಸಾರ್ವಜನಿಕ ವಲಯದಲ್ಲಿ ಮತ್ತೆ ಚರ್ಚೆ ಶುರುವಾಗಿದೆ.

Edited By : Nirmala Aralikatti
PublicNext

PublicNext

20/09/2026 02:30 pm

Cinque Terre

3.76 K

Cinque Terre

0

ಸಂಬಂಧಿತ ಸುದ್ದಿ