ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಲುಜಾರಿ ಬಿದ್ದು 4ನೇ ತರಗತಿ ಬಾಲಕಿ ಸಾವು, ಸಿಸಿಟಿವಿಯಲ್ಲಿ ಸೆರೆಯಾಯ್ತು ಕರುಳುಹಿಂಡುವ ದೃಶ್ಯ

ಶಾದ್‌ನಗರ (ತೆಲಂಗಾಣ) : ಶಾಲಾ ಮೆಟ್ಟಿಲು ಇಳಿಯುವ ವೇಳೆ ಆಕಸ್ಮಿಕವಾಗಿ ಕಾಲುಜಾರಿ ಬಿದ್ದ 9 ವರ್ಷದ ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾದ್‌ನಗರದಲ್ಲಿ ನಡೆದಿದೆ.

ಹೌದು ಶಾದ್‌ನಗರದ ಇಂಡಿಯನ್ ಪಬ್ಲಿಕ್ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದ ವರ್ಣಿಕಾ (9) ಎಂಬ ಬಾಲಕಿ ಗುರುವಾರ ಸಹಪಾಠಿಗಳೊಂದಿಗೆ ಮೆಟ್ಟಿಲುಗಳ ಮೇಲೆ ಓಡಾಡುವಾಗ ಆಯತಪ್ಪಿ ಕಾಲುಜಾರಿದ ಪರಿಣಾಮ, ಆಕೆ ನೇರವಾಗಿ ಮುಖ ಹಾಗೂ ತಲೆಯ ಭಾಗ ಕೆಳಗೆ ತಾಗುವಂತೆ ಮೆಟ್ಟಿಲುಗಳ ಮೇಲೆ ಬಿದ್ದಿದ್ದಾಳೆ. ಬಿದ್ದ ತೀವ್ರತೆಗೆ ಮುಖಕ್ಕೆ ಗಂಭೀರ ಗಾಯಗಳಾಗಿ ಆಕೆ ಸ್ಥಳದಲ್ಲೇ ಪ್ರಜ್ಞೆ ಕಳೆದುಕೊಂಡಿದ್ದಾಳೆ.

ತಕ್ಷಣವೇ ಎಚ್ಚೆತ್ತ ಶಾಲಾ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಬಾಲಕಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ಕೊಡಿಸಿದರು. ಆದರೆ ಗಾಯದ ತೀವ್ರತೆಯಿಂದಾಗಿ ಆಕೆ ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.

ಬಾಲಕಿ ಮೆಟ್ಟಿಲಿನಿಂದ ಆಯತಪ್ಪಿ ಕೆಳಗೆ ಉರುಳುವ ಇಡೀ ದೃಶ್ಯ ಶಾಲೆಯ ಮುಂಭಾಗ ಅಳವಡಿಸಲಾಗಿದ್ದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ನೆಟ್ಟಿಗರಲ್ಲಿ ತೀವ್ರ ಆಘಾತ ಮೂಡಿಸಿದೆ. ಘಟನೆ ಸಂಬಂಧ ಶಾದ್‌ನಗರ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.

Edited By : Nirmala Aralikatti
PublicNext

PublicNext

20/09/2026 01:58 pm

Cinque Terre

9.72 K

Cinque Terre

0

ಸಂಬಂಧಿತ ಸುದ್ದಿ